ಕನಕ ಮುಸುಕು
ನನಗೆ ಡಾ. ಕೆ.ಎನ್.ಗಣೇಶಯ್ಯ ನವರ ಕಾದಂಬರಿಗಳನ್ನ ಪರಿಚಯಿಸಿದ್ದು ನನ್ನ ಗೆಳತಿ ಜ್ಯೋತಿ . ಸದಾ ನನ್ನದೇ ಲೋಕದಲ್ಲಿ ಏಕಾಂಗಿಯಾಗಿರುತ್ತಿದ್ದ ನನಗೆ ಗಣೇಶಯ್ಯನವರ ಕಾದಂಬರಿಗಳು ಸಿಕ್ಕಿದ್ದು ನಿಧಿ ಸಿಕ್ಕಿದಂತಾಯಿತು. ಸುಮಾರು ಐದಾರು ವರ್ಷಗಳಿಂದ ಹಿಡಿದು ಇಂದಿನವರೆಗೂ ಅವರ ಕೃತಿಗಳನ್ನು ನಾಲ್ಕೈದು ಬಾರಿ ಓದಿದ್ದೇನೆ. ಆದರೂ ಮೊದಲ ಸಲ ಓದಿದಷ್ಟೇ ತೃಪ್ತಿಯಿದೆ. ಗಣೇಶಯ್ಯನವರ ಕಾದಂಬರಿಗಳಿಂದಲೆ ಇಂದು ನಾನೂ ಒಬ್ಬ ಸಕ್ರಿಯ ಓದುಗಾರ್ತಿಯಾಗಿರುವುದು ಮತ್ತು ಪುಸ್ತಕಗಳ ಬಗೆಗೆ ಅಪಾರ ಪ್ರೀತಿ ಬೆಳೆಸಿಕೊಂಡಿರುವುದು. ಗಣೇಶಯ್ಯನವರ ಕಾದಂಬರಿಗಳ ವಿಶೇಷತೆ ಎಂದರೆ ಭಾರತದ ಇತಿಹಾಸದ ಇಂಚಿಂಚನ್ನೂ ಬೇಸರ ಬರದಂತೆ ಪರಿಚಯಿಸುತ್ತಾ, ಪ್ರತಿಯೊಂದಕ್ಕೂ ಪುರಾವೆಗಳನ್ನೊದಗಿಸುತ್ತಾ, ಒಂದು ಹೊಸ ಭ್ರಮಾಲೋಕವನ್ನು ಸೃಷ್ಟಿಸಿ ಓದುಗರನ್ನು ಹಿಡಿದಿಡುವುದು. ಮೊದಲ ಬಾರಿಗೆ ಇವರ ಕನಕ_ಮುಸುಕು ಕಾದಂಬರಿಯನ್ನು ಓದಿ ನನ್ನ ಗೆಳತಿಗೆ ಕರೆ ಮಾಡಿ "ಇದೆಲ್ಲಾ ನಿಜವಾ ??? ನಮ್ಮ ವಾಜಿದ್ ಸರ್ (ಇತಿಹಾಸದ ಪ್ರಾಧ್ಯಾಪಕರು) ಇದನ್ನೆಲ್ಲಾ ಹೇಳಲೇ ಇಲ್ವಲ್ಲಾ??" ಅಂತ ಕೇಳಿದ್ದೆ. ಅಬ್ಬಾ!! ಒಂದು ಕಾದಂಬರಿ ಬರೆಯುವ ಮುನ್ನ ಒಬ್ಬ ಲೇಖಕ ಎಷ್ಟೇಲ್ಲಾ ಸಂಶೋಧನೆ ಮಾಡುತ್ತಾರೆ?? ನಿಜವಾಗಿಯೂ ಇದನ್ನೆಲ್ಲಾ ಮಾಡಬಲ್ಲರೇ?? ಎಂಬ ಅನುಮಾನ ಓದುಗರಗೆ ಕಾಡದೆ ಇರುವುದಿಲ್ಲ. ಇನ್ನು #ಕನಕ_ಮುಸುಕು ಕಾದಂಬರಿಯತ್ತ ಹೊರಡೋಣವೆ?? ಕರ್ನಾಟಕದ ಸೋಮನಾಥಪು...