ಕನಕ ಮುಸುಕು
ನನಗೆ ಡಾ. ಕೆ.ಎನ್.ಗಣೇಶಯ್ಯನವರ ಕಾದಂಬರಿಗಳನ್ನ ಪರಿಚಯಿಸಿದ್ದು ನನ್ನ ಗೆಳತಿ ಜ್ಯೋತಿ. ಸದಾ ನನ್ನದೇ ಲೋಕದಲ್ಲಿ ಏಕಾಂಗಿಯಾಗಿರುತ್ತಿದ್ದ ನನಗೆ ಗಣೇಶಯ್ಯನವರ ಕಾದಂಬರಿಗಳು ಸಿಕ್ಕಿದ್ದು ನಿಧಿ ಸಿಕ್ಕಿದಂತಾಯಿತು. ಸುಮಾರು ಐದಾರು ವರ್ಷಗಳಿಂದ ಹಿಡಿದು ಇಂದಿನವರೆಗೂ ಅವರ ಕೃತಿಗಳನ್ನು ನಾಲ್ಕೈದು ಬಾರಿ ಓದಿದ್ದೇನೆ. ಆದರೂ ಮೊದಲ ಸಲ ಓದಿದಷ್ಟೇ ತೃಪ್ತಿಯಿದೆ. ಗಣೇಶಯ್ಯನವರ ಕಾದಂಬರಿಗಳಿಂದಲೆ ಇಂದು ನಾನೂ ಒಬ್ಬ ಸಕ್ರಿಯ ಓದುಗಾರ್ತಿಯಾಗಿರುವುದು ಮತ್ತು ಪುಸ್ತಕಗಳ ಬಗೆಗೆ ಅಪಾರ ಪ್ರೀತಿ ಬೆಳೆಸಿಕೊಂಡಿರುವುದು.
ಗಣೇಶಯ್ಯನವರ ಕಾದಂಬರಿಗಳ ವಿಶೇಷತೆ ಎಂದರೆ ಭಾರತದ ಇತಿಹಾಸದ ಇಂಚಿಂಚನ್ನೂ ಬೇಸರ ಬರದಂತೆ ಪರಿಚಯಿಸುತ್ತಾ, ಪ್ರತಿಯೊಂದಕ್ಕೂ ಪುರಾವೆಗಳನ್ನೊದಗಿಸುತ್ತಾ, ಒಂದು ಹೊಸ ಭ್ರಮಾಲೋಕವನ್ನು ಸೃಷ್ಟಿಸಿ ಓದುಗರನ್ನು ಹಿಡಿದಿಡುವುದು. ಮೊದಲ ಬಾರಿಗೆ ಇವರ ಕನಕ_ಮುಸುಕು ಕಾದಂಬರಿಯನ್ನು ಓದಿ ನನ್ನ ಗೆಳತಿಗೆ ಕರೆ ಮಾಡಿ "ಇದೆಲ್ಲಾ ನಿಜವಾ ??? ನಮ್ಮ ವಾಜಿದ್ ಸರ್ (ಇತಿಹಾಸದ ಪ್ರಾಧ್ಯಾಪಕರು) ಇದನ್ನೆಲ್ಲಾ ಹೇಳಲೇ ಇಲ್ವಲ್ಲಾ??" ಅಂತ ಕೇಳಿದ್ದೆ.
ಅಬ್ಬಾ!! ಒಂದು ಕಾದಂಬರಿ ಬರೆಯುವ ಮುನ್ನ ಒಬ್ಬ ಲೇಖಕ ಎಷ್ಟೇಲ್ಲಾ ಸಂಶೋಧನೆ ಮಾಡುತ್ತಾರೆ?? ನಿಜವಾಗಿಯೂ ಇದನ್ನೆಲ್ಲಾ ಮಾಡಬಲ್ಲರೇ?? ಎಂಬ ಅನುಮಾನ ಓದುಗರಗೆ ಕಾಡದೆ ಇರುವುದಿಲ್ಲ.
ಅಬ್ಬಾ!! ಒಂದು ಕಾದಂಬರಿ ಬರೆಯುವ ಮುನ್ನ ಒಬ್ಬ ಲೇಖಕ ಎಷ್ಟೇಲ್ಲಾ ಸಂಶೋಧನೆ ಮಾಡುತ್ತಾರೆ?? ನಿಜವಾಗಿಯೂ ಇದನ್ನೆಲ್ಲಾ ಮಾಡಬಲ್ಲರೇ?? ಎಂಬ ಅನುಮಾನ ಓದುಗರಗೆ ಕಾಡದೆ ಇರುವುದಿಲ್ಲ.
ಇನ್ನು #ಕನಕ_ಮುಸುಕು ಕಾದಂಬರಿಯತ್ತ ಹೊರಡೋಣವೆ?? ಕರ್ನಾಟಕದ ಸೋಮನಾಥಪುರದ ಇತಿಹಾಸದ ಸುತ್ತಲೂ ಹರಡಿರುವ ಈ ಕಾದಂಬರಿಯಲ್ಲಿ ಪ್ರಮುಖವಾಗಿ ಧರ್ಮವೊಂದು ಮುಖ್ಯ ಪಾತ್ರವಹಿಸುತ್ತದೆ. ಚಂದ್ರಗುಪ್ತಮೌರ್ಯನು ಜೈನ ಸನ್ಯಾಸಿಯಾಗಿ ದೀಕ್ಷೆ ಸ್ವೀಕರಿಸಿದ ನಂತರ ತನ್ನ ರಾಜ್ಯದಿಂದ ಹೊರಟು ದಕ್ಷಿಣ ಭಾರತಕ್ಕೆ ಮತ ಪ್ರಚಾರಕ್ಕೆಂದು ಸುಮಾರು 10,000 ರಿಂದ 12,000 ಜೈನ ಮುನಿಗಳೊಡನೆ ಬರುತ್ತಾನೆ.
ಹೊಯ್ಸಳರ ಕಾಲದ ಶಾಂತಲೆಯೂ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಚಂದ್ರಗುಪ್ತಮೌರ್ಯನಿಗೂ ಹೊಯ್ಸಳರ ಶಾಂತಲೆಗೂ ಏನು ಸಂಬಂಧ??
ಕೇವಲ ಮತ ಪ್ರಚಾರಕ್ಕಾಗಿ 10,000 ರಿಂದ 12,000 ಜೈನಭುನಿಗಳ ಅಗತ್ಯವಿದೆಯೆ??
ಚಂದ್ರಗುಪ್ತಮೌರ್ಯ ಸನ್ಯಾಸ ದಿಕ್ಷೆ ಧರಿಸಿ ಹೊರಟ ನಂತರ ಆತನ ಆಸ್ಥಾನದಲ್ಲಿದ್ದ ಅಪಾರ ಸಂಪತ್ತು ಏನಾಯಿತು?? ಆ ಅಪಾರ ಸಂಪತ್ತನ್ನು ತನ್ನೊಡನೆ ತಂದನೆ?? ಅಥವಾ ಇಲ್ಲವೇ?? ಒಂದು ವೇಳೆ ತಂದಿದ್ದರೆ ಆ ಅಪಾರ ಸಂಪತ್ತು ಏನಾಯಿತು(ಎಲ್ಲಿದೆ) ??
ಚಂದ್ರಗುಪ್ತಮೌರ್ಯನ ನಂತರ ಅಧಿಕಾರಕ್ಕೆ ಬಂದವರು ರಾಜ್ಯಭಾರ ಮಾಡಲಾರದಂತ ಅಸಮರ್ಥರೇ??
ಇಂದಿಗೂ ಜೈನ ಬಸದಿ(ಟ್ರಸ್ಟ್)ಗಳಿಗೆ ಹಣದ ಹೊಳೆ ಹರಿದು ಬರುತ್ತಿರುವುದು ಎಲ್ಲಿಂದ ??

ಅಬ್ಬಬ್ಬಾ!!!!!! ಎಷ್ಟೊಂದು ಪ್ರಶ್ನೆಗಳು??? ಅಲ್ವಾ..
ಇನ್ನೊಂದೆಡೆ ಇವರ(ಕಥಾನಾಯಕಿಯ)ನ್ನು ಬೆಂಬಿಡದೆ ಕಾಡುತ್ತಿರುವ ಅಂತರಾಷ್ಟ್ರೀಯ ಕಳ್ಳರ ಚಕ್ರವ್ಯೂಹವನ್ನು ನಾಯಕಿ ಚಾಕಚಕ್ಯತೆಯಿಂದ ಎದುರಿಸಿ ಗೆದ್ದು, ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯುವಳೆ????
(ಏನೇ ಹೇಳಿ ಆ ಅಂತರಾಷ್ಟ್ರೀಯ ಕಳ್ಳರ ಗುಂಪಿನ ಜಾಣತನ, ಮುಂದಾಲೋಚನೆಯ, ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡ ಸನ್ನಿವೇಶವನ್ನು ಲೇಖಕರು ಅದ್ಭುತವಾಗಿ ಚಿತ್ರಿಸಿದ್ದಾರೆ)
ಹ್ಮ್
ಸರಿ ಹಾಗಾದರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಅಡಗಿದೆ ಮುಸುಕಿನ_ಜೋಳದಲ್ಲಿ ನೀವು ಒಂದು ಮುಸುಕಿನ ಜೋಳ ತಂದು ನೋಡೆಬಿಡಿ ಉತ್ತರವನ್ನ.
ಛೇ... ಇಷ್ಟೇಲ್ಲಾ ಹೇಳಿ ಕಾದಂಬರಿ ಒಳಗೇನಿದೆ ಅಂತ ಬೇಜಾರು ಮಾಡ್ಕೋಬೇಡಿ, ನಿಮಗೆ ಅಂತ ಒಂದು ರಹಸ್ಯ ಹೇಳ್ತೀನಿ ಕೇಳಿ -
"ಕಾದಂಬರಿಯ ಹೆಸರಿಗೂ, ಸೋಮನಾಥಪುರದ ಶಿಲ್ಪಕಲೆಯಲ್ಲಿ ಕಂಡು ಬರುವ ಜೋಳದ ಕೆತ್ತನೆಗೂ ಸಹ ಚಂದ್ರಗುಪ್ತಮೌರ್ಯನೊಡನೆ ಬಿಡಿಸಲಾರದ ನಂಟಿದೆ. ಕಾದಂಬರಿಯ ಹೆಸರನ್ನು ಸರಿಯಾಗಿ ಅರ್ಥೈಸಿದವರಿಗೆ ಮಾತ್ರ ಜೋಳದ ಸವಿ ಸವಿಯಲು ಸಾಧ್ಯ"

#PRIYA #JP

Comments
Post a Comment