Posts

Showing posts from 2017

ಟೆಡಿಬೇರ್

Image
ಹುಡುಗಿಯರಿಗೆ ಟೆಡಿಬೇರ್ ಅಂದ್ರೆ ಯಾಕೆ ಅಷ್ಟೊಂದು ಇಷ್ಟ ?? ಹೀಗೊಂದು ಪ್ರಶ್ನೆ ಕಳೆದ ಶುಕ್ರವಾರ ಸಹೋದ್ಯೋಗಿ ಒಬ್ಬರು ಕೇಳಿದ್ರು. ಸ್ವಲ್ಪ ತಬ್ಬಿಬ್ಬಾದೆ,  ಉತ್ತರಿಸದೆ  ಒಂದು ಮುಗುಳ್ನಕ್ಕು ಸುಮ್ಮನಾದೆ. (ತುಂಬಾ ಸಲ ಉತ್ತರಿಸುವ ಮನಸ್ಸಾಗದಿದ್ರೆ, ನಾನು ಕೊಡೊ ಉತ್ತರ ಅನಗತ್ಯ ವಾದ-ವಿವಾದಕ್ಕೆ ಮುನ್ನುಡಿಯಾಗುತ್ತೆ ಅನ್ನುವುದಾದರೆ  ಒಂದು ಮುಗುಳ್ನಕ್ಕು ಸುಮ್ಮನಾಗುತ್ತೇನೆ.) ಹತ್ತು ವರ್ಷದೊಳಗಿನ ಮಕ್ಕಳಿಗೆ ಇದು ಕೇವಲ ಆಟವಾಡುವ ವಸ್ತು. ಟಿನೇಜ್ ಹುಡುಗಿಯರಿಗೊ ಟೆಡಿಬೇರ್ ಅನ್ನೋದು ಪ್ರತಿಷ್ಟೆಯ ವಿಷಯ. ಎಷ್ಟು ಹೆಚ್ಚು ಬೊಂಬೆಗಳಿವೆಯೊ ಅಷ್ಟು ಹೆಮ್ಮೆ. ಇನ್ನೂ ಹುಡುಗರಿಗೊ ತಮ್ಮ ಹುಡುಗಿಯ ಮನವೊಲಿಸಿಕೊಳ್ಳುವ ಅತ್ಯುತ್ತಮ ಮಾರ್ಗ. ಸೇಹಿತೆಯೋರ್ವಳು "ಮೊನ್ನೆ ರಾಗಿ ಗುಡ್ಡದ ಜಾತ್ರೆಯಲ್ಲಿ ಈ ಪಿಂಕ್ ಟೆಡ್ಡಿ ತಗೊಂಡೆ. ಎಷ್ಟು ಕ್ಯೂಟಾಗಿದೆ ನೋಡು"   ಅಂತ ವಾಟ್ಸಪ್ನಲ್ಲಿ ಫೋಟೋ ಕಳುಹಿಸಿದ್ಲು. ಈ ಕಡೆ ಆ ಫೋಟೋ ನೋಡಿದ ಮತ್ತೊಬ್ಬಳಿಗೆ ಒಳಗೊಳಗೇ ಸಂಕಟ "ಅರೇ ಎಷ್ಟು ಮುದ್ದಾಗಿದೆ. ನನಗೆ ಸಿಗಲಿಲ್ಲವಲ್ಲ" ಅಂತ. ಇದೆಲ್ಲಾ ಸಾಮಾನ್ಯ ವಿಚಾರಗಳು ಆದ್ರೆ ಈ ಕಾರಣಗಳಿಂದ ಟೆಡಿಬೇರ್ ವಿಶೇಷ ಸ್ಥಾನಮಾನ ಪಡೆದಿಲ್ಲ ಅದಕ್ಕೆ ಬೇರೆ ಕಾರಣವೇ ಇದೆ. ಯಾವ ಹುಡುಗಿನೆ ಆಗ್ಲಿ ಟೆಡಿಬೇರ್ ನ ತನ್ನ ಸ್ವಂತ ಮಗುವಿನ ಹಾಗೆ ಮುದ್ದಿಸ್ತಾಳೆ, ತನ್ನ ಮಗುವಿನ ಹಾಗೆ ನೋಡ್ಕೊತಾಳೆ. ತನಗೆ ತಿಳಿಯದಂತೆ ತಾಯ್ತನದ ಆನಂದವನ್ನನುಭವಿಸುತ್ತಾ...

ಒಂಟಿ ಸಲಗ

Image
ಪ್ರತಿದಿನದಂತೆ ಆ ದಿನಾನೂ ಡೈರಿಗೆ ಹಾಲು ಕೊಟ್ಟು ಬಂದವಳು. ಹಂಡೆ ತುಂಬಾ ನೀರು ತುಂಬಿ, ಉರಿ ಹಾಕುತ್ತಿದ್ದೆ. ಮಾವ ಮಾರ್ಕೆಟ್ ಗೆ ಹೋಗಿದ್ದರಿಂದ ಅಜ್ಜಿ ಗುಡ್ಡದ ಕೆಳಗಿನ ಸೇವಂತಿಗೆ ತೋಟದ ಮೋಟರ್ ಆನ್ ಮಾಡಿ ಹಾಗೆ ನಾಲ್ಕೈದು ಹೀರೆಕಾಯಿ ಕೊಯ್ದು ತಾ ಎಂದಳು. ನನ್ನದೇ ಲೋಕದಲ್ಲಿ ವಿಹರಿಸುತ್ತ ಮಾವಿನ ತೋಪಿನ ದಾರಿಯಲ್ಲಿ ನಡೆಯುತ್ತಿದ್ದೆ, ದಾರಿಯಲ್ಲಿ ಸಿಕ್ಕ ವಾಸು (ಮಾವನ ಸ್ನೇಹಿತ) "ನಿಮ್ ಹಲಸಿನ ಮರದ ತೋಟಕ್ಕೆ ರಾತ್ರಿ ಒಂಟಿ ಆನೆ ಬಂದಿತ್ತು, ಕೆಳಗಿದ್ದ ಹಲಸಿನ ಮರದ ಕೊಂಬೆ ಮತ್ತೆ ನಾಲ್ಕು ಪರಂಗಿ ಮರ ಮುರಿದೈತೆ. ಆ ಕಡೆ ಹೋಗ್ಬೇಡ ಹುಷಾರು ಎಂದ. ಸರಿ ಮಾವ ಮನೇಲಿಲ್ಲ ಸೇವಂತಿಗೆ ತೋಟಕ್ಕೆ ನೀರು ಬಿಟ್ಟು ಬರ್ತೀನಿ ಆ ಕಡೆ ಹೋಗಲ್ಲ ಅಂತ್ಹೇಳಿ ತೋಟದ ಕಡೆ ಹೊರಟೆ. ಅದ್ಯಾಕೋ ಸಣ್ಣನಡುಕ  ಶುರುವಾಯಿತು ಆದರೂ ಹೆದರದೆ "ಇದೇನು ಮೊದಲ ಸಲ ಅಲ್ಲ ಅಲ್ವಾ ನಮ್ಮ ತೋಟಕ್ಕೆ ಆನೆ ಬಂದಿದ್ದು. ಹಾಗೆ ನೋಡಿದ್ರೆ ಇಷ್ಟು ಹೊತ್ತಿಗೆ ವಾಸಿ ಬಂದರು ಅಂದ್ರೆ ಆನೆ ವಾಪಸ್ ಹೋಗಿರುತ್ತೆ. ನಾನ್ಯಾಕೆ ಭಯ ಪಡಬೇಕು. ಅಲ್ಲದೆ ಹಲಸಿನ ಮರದ ತೋಟ ಇರೋದು ಮೈನ್ ರೋಡಲ್ಲಿ ಆದ್ರೆ ಸೇವಂತಿಗೆ ತೋಟ ಇರೋದು ಅದಕ್ಕಿಂತ ಅರ್ಧ ಕಿಲೋ ಮೀಟರ್ ದೂರ ಅಷ್ಟಕ್ಕೂ ಏನಾದರೂ ತೊಂದರೆ ಆದ್ರೆ ನಜೀರಣ್ಣ ಪಕ್ಕದಲ್ಲೆ ಇರ್ತಾನೆ" ಅಂತ ನನಗೆ ನಾನೆ ಲೆಕ್ಕಾಚಾರ ಹಾಕಿಕೊಂಡು ನಡೆಯುತ್ತಿದ್ದೆ ಅಷ್ಟರಲ್ಲಾಗಲೇ ತೋಟದ ಹತ್ತಿರ ಬಂದಿದ್ದೆ. ಆಗ ತಾನೆ ಚಳಿಗಾಲ ಶುರುವಾಗಿದ್ದರಿಂದ (ಸೆ...
Image
ನನ್ನೂರ ಬೆಳಗು....... ಸುಗ್ಗಿ ಸಮಯ ಕಣದ ಬಲ ಬದಿಗೆ ರಾಗಿಯ ರಾಶಿ, ಎಡ ಬದಿಯಲ್ಲೊಂದು ಕಡೆ ತೊಗರಿ, ಮತ್ತೊಂದು ಕಡೆ ಅವರೆ. ಆಳೆತ್ತರಕ್ಕೆ ಪೇರಿಸಿಟ್ಟ ಮೊರಗಳು. ಪಕ್ಕದಲ್ಲೆ ಸದಾ ಹರಿವ ಕಾಲುವೆ. ಕಣ್ಣು ಹಾಯಿದಷ್ಟು ದೂರಕ್ಕೂ ಕಾಣುವ ಹಸಿರು.  ತೋಟದ ತುಂಬ ತೆಂಗು, ಹಲಸು, ಮಾವು, ಪೇರಲೆ, ಪಪ್ಪಾಯ, ಕಾಡು ಜಿರಂಗಿ ( ರಾಮಫಲ) ಸಪೋಟ, ದಾಳಿಂಬೆ, ನೆಲ್ಲಿ ಮರಗಳ ಜೊತೆಗೆ ಒಡಲ ತುಂಬ ಹೂವು ತುಂಬಿಕೊಂಡು ಬಳುಕುತ್ತ ನಿಂತ ವೈಯ್ಯಾರಿ ಸೇವಂತಿಗೆ ಗಿಡಗಳು. ಒಮ್ಮೆ ಇವನ್ನೆಲ್ಲ ಒಟ್ಟಿಗೆ ಕಂಡರೆ ಏನೋ ಹೆಮ್ಮೆ, ಹೇಳಲಾರದ ಸಂತಸ. ಸುಗ್ಗಿ ಸಮಯದಲ್ಲಿ ಮನೆ ಮಂದಿ ಎಲ್ಲ ಹೊಲದಲ್ಲಿ ಮಲಗುವುದು ವಾಡಿಕೆ. ಬೆಳ್ಳಂಬೆಳಗ್ಗೆ ಮೂರು ಗಂಟೆಗೆ ಎದ್ದು ಹೊಲದಿಂದ ಮನೆಗೆ ಅದೂ ತಾತನ ಜೊತೆ ಹೋಗಬೇಕಾದರೆ ಆ ಮೈಕೊರೆವ ಛಳಿ, ಒಂದೆ ಸಮನೆ ಬಿಸೋ ಸುಳಿರ್ಗಾಳಿಯಲಿ ದಂಡಿ ಯಾತ್ರೆಯ ಕಥೆ( ಎಷ್ಟಾದರೂ ಗಾಂಧೀಜಿಯ ಪರಮ ಭಕ್ತ )  ಹೇಳ್ತಾ ಹೋಗುತ್ತಿದ್ದರು(ಓಡುತ್ತಿದ್ದರು. ಅವರ ನಡಿಗೆ ನನ್ನ ಓಟ) ನನಗೊ ಮನಸ್ಸು ಪೂರ ದಾರಿಯಲ್ಲಿ ಸಿಗುವ ಎಲಚೆ ಮರದಲ್ಲಿ ಸಿಗುವ ಎಲಚೆ ಹಣ್ಣುಗಳ ಹೆಕ್ಕುವ ಚಿಂತೆ. ಮನವನರಿಯವರಂತೆ ಮರ ಬರುತ್ತಿದ್ದಂತೆ ಹಣ್ಣಗಳು ತುಂಬಿದ್ದ ಕೊಂಬೆಯ ಕೆಳಗೆ ಪಂಚೆ ಹಾಸಿ ನಿರ್ಧಾರಕ್ಕೆ ಮರವ ಹತ್ತಿ ಕೊಂಬೆಯನೊಮ್ಮೆ ಅಲುಗಿಸಿದರೆ ಆ ದಿನದ ಬಹು ಮುಖ್ಯವಾದ ಕೆಲಸ ಮುಗಿಸಿದ ಹೆಮ್ಮೆ ಅವರಿಗೆ. ಗೆಳತಿಯರೊಡನೆ ಹಂಚಿ ತಿನ್ನುವ ಸಂಭ್ರಮ ನನಗೆ.  ತತ್..... ...

ಅವನು

Image
ರಾತ್ರಿ ಪೂರ ನನ್ನ ರೂಮ್ ಕ್ಲೀನ್ ಮಾಡುವ ಹಠಕ್ಕೆ ಬಿದ್ದವಳಂತೆ ಎಲ್ಲವನ್ನೂ ಹರಡಿಕೊಂಡಿದ್ದೆ. ಬೆಡ್ ಮೇಲಿದ್ದ ನಾಲ್ಕು ಪುಸ್ತಕಗಳನ್ನು ಅವುಗಳ ಸ್ವಸ್ಥಾನದಲ್ಲಿರಿಸಿದರೆ ಕೆಲಸ ಮುಗಿಯುತ್ತಿತ್ತು. ಹಾಗೆ ಪುಸ್ತಕಗಳ ಮೇಲೆ ಕಣ್ಣಾಡಿಸಿದೆ. "ಬಳ್ಳಿಕಾಳಬೆಳ್ಳಿ" ಇತ್ತೀಚೆಗೆ ಓದಿ ಮುಗಿಸಿದ್ದೆನಾದರೂ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. "ಉರಿಯ ನಾಲಗೆ" ನಂದಿನಿ ಈ ಪುಸ್ತಕ ಓದು ಅಂತ ಕೊಟ್ಟ ಎರಡು ವರ್ಷಗಳೆ ಕಳೆದಿವೆ ಆದರೂ ಓದುವ ಘಳಿಗೆ ಕೂಡಿ ಬಂದಿರಲಿಲ್ಲ. "ಮಿಸಳ್ ಭಾಜಿ" ಈ ಪುಸ್ತಕ ಒಂಥರಾ ನನ್ನ ಸಂಗಾತಿ ದಿನವೂ ಪಕ್ಕದಲ್ಲಿರಲೆಬೇಕು. ನಾಲ್ಕನೆಯ ಪುಸ್ತಕದ "ಈ ಗುಲಾಬಿಯು ನಿನಗಾಗಿ........." ಪುಸ್ತಕ ಹೆಸರು ನೋಡಿತ್ತಿದ್ದಂತೆ  ಮನದಳಾದಲ್ಲೆಲ್ಲೊ ಹುದುಗಿ ಹೋಗಿದ್ದ ಅವನ ನೆನಪುಗಳು ಧುತ್ತನೆ ಎದ್ದು ನಿಂತವು. ಅರೆ ಕ್ಷಣದಲ್ಲೆ ಮನವನ್ನು ಆವರಿಸಿದ. ನನ್ನನ್ನೆ ಕಾಡುತ್ತಿದ್ದವನ ನೋಡುವ ಮನಸ್ಸಾಗಿ ಫೇಸ್ಬುಕ್ ಓಪನ್ ಮಾಡಿ ಅವನ ವಾಲ್ ನೋಡಿದೆ. ಇಂದು ಬೆಳಗ್ಗೆ ತಾನೆ ಲೈವ್ ಬಂದಿದ್ದಾನೆ, ಅದು ಮಾಂಗಲ್ಯ ಧಾರಣೆಯ ಸಂದರ್ಭದಲ್ಲಿ ಏನೋ ತಿಳಿಯದ ನೋವು. ಮದುಮಗನ ಮುಖ ಸರಿಯಾಗಿ ಕಾಣತ್ತಿಲ್ಲ. ಆತಂಕ ಹೆಚ್ಚಾಯಿತು ಸುಮಾರು ನಾಲ್ಕೈದು ಸಲ ವಿಡಿಯೋ ನೋಡಿದ ಮೇಲೆ ಅವನಲ್ಲ ಎಂದು ಖಾತ್ರಿಯಾಗಿ ಸ್ವಲ್ಪ ನಿರಾಳವಾದೆ. ಹೌದು ಅವನಿಗೆ ಮದುವೆಯಾದರೆ ನಾನೇಕೆ ನೋವು ಅನುಭವಿಸಬೇಕು?? ನನ್ನನ್ನು ನಾನೆ ಕೇಳ...

ಕನಕ ಮುಸುಕು

Image
ನನಗೆ ಡಾ. ಕೆ.ಎನ್.ಗಣೇಶಯ್ಯ ನವರ ಕಾದಂಬರಿಗಳನ್ನ ಪರಿಚಯಿಸಿದ್ದು ನನ್ನ ಗೆಳತಿ  ಜ್ಯೋತಿ . ಸದಾ ನನ್ನದೇ ಲೋಕದಲ್ಲಿ ಏಕಾಂಗಿಯಾಗಿರುತ್ತಿದ್ದ ನನಗೆ ಗಣೇಶಯ್ಯನವರ ಕಾದಂಬರಿಗಳು ಸಿಕ್ಕಿದ್ದು  ನಿಧಿ   ಸಿಕ್ಕಿದಂತಾಯಿತು. ಸುಮಾರು ಐದಾರು ವರ್ಷಗಳಿಂದ ಹಿಡಿದು ಇಂದಿನವರೆಗೂ ಅವರ ಕೃತಿಗಳನ್ನು ನಾಲ್ಕೈದು ಬಾರಿ ಓದಿದ್ದೇನೆ. ಆದರೂ ಮೊದಲ ಸಲ ಓದಿದಷ್ಟೇ ತೃಪ್ತಿಯಿದೆ. ಗಣೇಶಯ್ಯನವರ ಕಾದಂಬರಿಗಳಿಂದಲೆ ಇಂದು ನಾನೂ ಒಬ್ಬ ಸಕ್ರಿಯ ಓದುಗಾರ್ತಿಯಾಗಿರುವುದು ಮತ್ತು ಪುಸ್ತಕಗಳ ಬಗೆಗೆ ಅಪಾರ ಪ್ರೀತಿ ಬೆಳೆಸಿಕೊಂಡಿರುವುದು. ಗಣೇಶಯ್ಯನವರ ಕಾದಂಬರಿಗಳ ವಿಶೇಷತೆ ಎಂದರೆ ಭಾರತದ ಇತಿಹಾಸದ ಇಂಚಿಂಚನ್ನೂ ಬೇಸರ ಬರದಂತೆ  ಪರಿಚಯಿಸುತ್ತಾ, ಪ್ರತಿಯೊಂದಕ್ಕೂ ಪುರಾವೆಗಳನ್ನೊದಗಿಸುತ್ತಾ, ಒಂದು ಹೊಸ ಭ್ರಮಾಲೋಕವನ್ನು ಸೃಷ್ಟಿಸಿ ಓದುಗರನ್ನು ಹಿಡಿದಿಡುವುದು. ಮೊದಲ ಬಾರಿಗೆ ಇವರ  ಕನಕ_ಮುಸುಕು  ಕಾದಂಬರಿಯನ್ನು ಓದಿ ನನ್ನ ಗೆಳತಿಗೆ ಕರೆ ಮಾಡಿ "ಇದೆಲ್ಲಾ ನಿಜವಾ ??? ನಮ್ಮ ವಾಜಿದ್ ಸರ್ (ಇತಿಹಾಸದ ಪ್ರಾಧ್ಯಾಪಕರು) ಇದನ್ನೆಲ್ಲಾ ಹೇಳಲೇ ಇಲ್ವಲ್ಲಾ??" ಅಂತ ಕೇಳಿದ್ದೆ. ಅಬ್ಬಾ!! ಒಂದು ಕಾದಂಬರಿ ಬರೆಯುವ ಮುನ್ನ ಒಬ್ಬ ಲೇಖಕ ಎಷ್ಟೇಲ್ಲಾ ಸಂಶೋಧನೆ ಮಾಡುತ್ತಾರೆ?? ನಿಜವಾಗಿಯೂ ಇದನ್ನೆಲ್ಲಾ ಮಾಡಬಲ್ಲರೇ?? ಎಂಬ ಅನುಮಾನ ಓದುಗರಗೆ ಕಾಡದೆ ಇರುವುದಿಲ್ಲ. ಇನ್ನು #ಕನಕ_ಮುಸುಕು ಕಾದಂಬರಿಯತ್ತ ಹೊರಡೋಣವೆ?? ಕರ್ನಾಟಕದ ಸೋಮನಾಥಪು...