Posts

Showing posts from January, 2018

ಸಂಕ್ರಾಂತಿ ಸಂಭ್ರಮ

Image
ಹತ್ತು - ಹದಿನೈದು ದಿನಗಳ ಮೊದಲೇ ಯಾವ ಬಣ್ಣದ ಪೈಂಟ್  ತರಬೇಕೆಂಬ ವಾದ-ವಿವಾದ ಕೆಂಪು, ಹಳದಿ, ಹಸಿರು, ನೀಲಿ, ಕಡು ನೀಲಿ ಹೇಗೆ ಪಟ್ಟಿ ಉದ್ದವಾಗುತ್ತಲೇ ಹೋಗುತ್ತದೆ. ನನ್ನ, ಮಾವನ ನಡುವಿನ ನಗುವಿನ ವಾಗ್ವಾದದಂತೆ. ಸ್ಟೋರ್ ರೂಮಿನ ಮೂಲೆಯಲ್ಲೆಲ್ಲೋ ಅಡಗಿ ಕುಳಿತಿರುವ ಪೈಂಟ್ ಬ್ರಶ್ಗೆ ಸೀಮೆಎಣ್ಣೆಯ ಸ್ನಾನ. ಲೇಟಾಯ್ತು,,, ಅದೆಷ್ಟು ಮೂಗುದಾರ ತರಬೇಕು ಅಂತ ಸರಿ ಹೇಳ್ಬಾರ್ದಾ?? ಕರಾಮಣಿಕಾಯಿ ಮಂಡಿಯಲ್ಲಿದೆ ಅಂತ ಬೆಳಿಗ್ಗೆ ನಾಲ್ಕಕ್ಕೆ ಮಾವನ ರಾಗ. ಅಂತೂ ಭಾನುವಾರ ಬಂತು, ಹಿಂದಿನ ದಿನವೇ ಪ್ರತಿ ಹಸುವಿನ ಕೊಂಬಿಗೂ ನಿರ್ದಿಷ್ಟ ಆಕಾರ ಕೊಟ್ಟು ಹೊಸ ಮೂಗುದಾರ ಹಾಕಿದ್ದಾಗಿತ್ತು. ಭಾನುವಾರ ಬೆಳಗ್ಗೆ ಏಳಕ್ಕೆಲ್ಲಾ ಎದ್ದು ನೀರಿನ ಹಂಡೆಗೆ ಕೆಂಡ ಸುರಿದು ಬೆಂಕಿ ಹಾಕಿ ಬಂದದ್ದಾಯಿತು. ಮೊದಲು ಬಣ್ಣ ಹಚ್ಚುವ ಸರದಿ ಗಾಡಿಗೆ ಕಟ್ಟುವ ಹಸುಗಳಿಗೆ, ಮಾವ ಬಣ್ಣ ಹಚ್ಚುತ್ತಿದ್ದರೆ ಹಸು ಅಲುಗಾಡದಂತೆ ಮೃದುವಾಗಿ ಅದರ ಮೂಗುದಾರ ಹಿಡಿದು ಮುಖ ಸವರುತ್ತಾ ನಿಲ್ಲುವ ಕೆಲಸ ನನ್ನದು. ಎಲ್ಲಾ ಹಸುಗಳ ಕೊಂಬಿಗೂ ಬಣ್ಣ ಹಚ್ಚಿದ ನಂತರ ಉಳಿದ ಬಣ್ಣದಲ್ಲಿ ಮನೆಯ ಹಿಂದಿನ ತೆಂಗಿನ ಮರದ ಮೇಲೆ, ಎತ್ತಿನ ಗಾಡಿಯ ಮೇಲೆ ಮನೆಯವರೆಲ್ಲರ ಹೆಸರು ಬರೆಯುವ ಸಂಭ್ರಮ ನನ್ನದು. ಅರೆರೆ ಹಬ್ಬಕ್ಕಿನ್ನ ನಾಲ್ಕೆದಿನ ಇರೋದು ನೀನು ಪ್ರತಿಮಾ ಇವತ್ತು ಎರಡನೇ ತುಂಡಲ್ಲಿರೋ ಅವರೆಕಾಯಿ ಪೂರ್ತಿ ಬಿಡಿಸಿಕೊಂಡು ಬನ್ನಿ. ನಾಳೆ ತೆಂಗಿನ ತೋಟದಲ್ಲಿ ಇರುವುದನ್ನು ತರುವಿರಂತೆ. ಮೆಣಕಾಲೆತ್ತರಕ...