ಸಂಕ್ರಾಂತಿ ಸಂಭ್ರಮ
ಹತ್ತು - ಹದಿನೈದು ದಿನಗಳ ಮೊದಲೇ ಯಾವ ಬಣ್ಣದ ಪೈಂಟ್ ತರಬೇಕೆಂಬ ವಾದ-ವಿವಾದ ಕೆಂಪು, ಹಳದಿ, ಹಸಿರು, ನೀಲಿ, ಕಡು ನೀಲಿ ಹೇಗೆ ಪಟ್ಟಿ ಉದ್ದವಾಗುತ್ತಲೇ ಹೋಗುತ್ತದೆ. ನನ್ನ, ಮಾವನ ನಡುವಿನ ನಗುವಿನ ವಾಗ್ವಾದದಂತೆ. ಸ್ಟೋರ್ ರೂಮಿನ ಮೂಲೆಯಲ್ಲೆಲ್ಲೋ ಅಡಗಿ ಕುಳಿತಿರುವ ಪೈಂಟ್ ಬ್ರಶ್ಗೆ ಸೀಮೆಎಣ್ಣೆಯ ಸ್ನಾನ. ಲೇಟಾಯ್ತು,,, ಅದೆಷ್ಟು ಮೂಗುದಾರ ತರಬೇಕು ಅಂತ ಸರಿ ಹೇಳ್ಬಾರ್ದಾ?? ಕರಾಮಣಿಕಾಯಿ ಮಂಡಿಯಲ್ಲಿದೆ ಅಂತ ಬೆಳಿಗ್ಗೆ ನಾಲ್ಕಕ್ಕೆ ಮಾವನ ರಾಗ. ಅಂತೂ ಭಾನುವಾರ ಬಂತು, ಹಿಂದಿನ ದಿನವೇ ಪ್ರತಿ ಹಸುವಿನ ಕೊಂಬಿಗೂ ನಿರ್ದಿಷ್ಟ ಆಕಾರ ಕೊಟ್ಟು ಹೊಸ ಮೂಗುದಾರ ಹಾಕಿದ್ದಾಗಿತ್ತು. ಭಾನುವಾರ ಬೆಳಗ್ಗೆ ಏಳಕ್ಕೆಲ್ಲಾ ಎದ್ದು ನೀರಿನ ಹಂಡೆಗೆ ಕೆಂಡ ಸುರಿದು ಬೆಂಕಿ ಹಾಕಿ ಬಂದದ್ದಾಯಿತು. ಮೊದಲು ಬಣ್ಣ ಹಚ್ಚುವ ಸರದಿ ಗಾಡಿಗೆ ಕಟ್ಟುವ ಹಸುಗಳಿಗೆ, ಮಾವ ಬಣ್ಣ ಹಚ್ಚುತ್ತಿದ್ದರೆ ಹಸು ಅಲುಗಾಡದಂತೆ ಮೃದುವಾಗಿ ಅದರ ಮೂಗುದಾರ ಹಿಡಿದು ಮುಖ ಸವರುತ್ತಾ ನಿಲ್ಲುವ ಕೆಲಸ ನನ್ನದು. ಎಲ್ಲಾ ಹಸುಗಳ ಕೊಂಬಿಗೂ ಬಣ್ಣ ಹಚ್ಚಿದ ನಂತರ ಉಳಿದ ಬಣ್ಣದಲ್ಲಿ ಮನೆಯ ಹಿಂದಿನ ತೆಂಗಿನ ಮರದ ಮೇಲೆ, ಎತ್ತಿನ ಗಾಡಿಯ ಮೇಲೆ ಮನೆಯವರೆಲ್ಲರ ಹೆಸರು ಬರೆಯುವ ಸಂಭ್ರಮ ನನ್ನದು.
ಅರೆರೆ ಹಬ್ಬಕ್ಕಿನ್ನ ನಾಲ್ಕೆದಿನ ಇರೋದು ನೀನು ಪ್ರತಿಮಾ ಇವತ್ತು ಎರಡನೇ ತುಂಡಲ್ಲಿರೋ ಅವರೆಕಾಯಿ ಪೂರ್ತಿ ಬಿಡಿಸಿಕೊಂಡು ಬನ್ನಿ. ನಾಳೆ ತೆಂಗಿನ ತೋಟದಲ್ಲಿ ಇರುವುದನ್ನು ತರುವಿರಂತೆ. ಮೆಣಕಾಲೆತ್ತರಕ್ಕೆ ಬೆಳೆದು ನಿಂತ ಅವರೆ ತೋಟ. ಬೆಳಗಿನ ಮಂಜಿನ ಹನಿಗಳು ಮಿರಮಿರನೆ ಮಿಂಚುತ್ತಿವೆ. ಅವರೆಕಾಯಿಗಿಂತ ಅವರೆ ಹೂವಿಗೆ ತೊಂದರೆಯಾಗದಂತೆ ಕಾಯಿ ಕೊಯ್ಯುವುದು ಕರಗತವಾಗಿರಬೇಕು ಇಲ್ಲವಾದಲ್ಲಿ ಎರಡನೇ ಸಲಕ್ಕೆ ಕಾಯಿ ಕಮ್ಮಿಯಾಗುತ್ತದೆ.
ಆಹಾ...... ಎಂಥಾ ಸೊಗಡು, ಎರಡು ಕಾಯಿ ಕೊಯ್ಯುತ್ತಲೇ ದ್ರವರೂಪದ ಅಂಟು ಕೈಗೆಲ್ಲಾ ಅಂಟಿ ಮತ್ತೇರಿಸುವುದು ಸುಳ್ಳಲ್ಲ. ಅವರೆಹೂವಿನೊಡನೆ ಜೇನುನೋಣಗಳ ಸರಸ ಕಣ್ಣಿಗೆ ಹಬ್ಬ. ಎರಡೂ ತೋಟದಲ್ಲಿನ ಕಾಯಿ ನಾಲ್ಕೈದು ಮಕ್ಕರಿಯಾಗಿದೆ, ಎರಡು ಮೊರಗಳಲ್ಲಿ ಕಾಯಿ ಪಕ್ಕದ ಮನೆಯ ರಾಧಕ್ಕ ಮತ್ತು ಜಯಮ್ಮನ ಪಾಲು. ಉಳಿದುದರಲ್ಲಿ ಹಬ್ಬದ ದಿನ ಬೇಯಿಸಲು, ಹಿತಕವರೆಕಾಳಿಗೆ ಮತ್ತು ಹಣ್ಣಾದವುಗಳನ್ನು ಅವರೆಕಾಳಿಗೆ ಅಂತ ವಿಂಗಡಿಸಿ, ರಾತ್ರಿ ಮನೆಯ ಹೊರಗೆ ಮಂಜಿನಲ್ಲಿಡುವುದು ಅಜ್ಜಿ ಕೆಲಸ.
ನುಗ್ಗೆಮರವೇರಿ ಅದಕ್ಕೆ ತಾಗಿಕೊಂಡಂತಿರುವ ತೆಂಗಿನಮರದಿಂದ ಹತ್ತಾರು ಎಳನೀರು ಬೀಳಿಸಿ, ನಾನು ಅಕ್ಕ (ಮಾವನ ಹೆಂಡತಿ, ದೊಡ್ಡಪ್ಪನ ಮಗಳೇ ಆಗಿದ್ದುದ್ದರಿಂದ ಅಕ್ಕ ಅಂತ್ಲೇ ಕರೀತಿದ್ದೆ) ಎರಡು ಎಳನೀರು ಕುಡಿದು. ಉಳಿದದ್ದನ್ನು ಗಾಡಿಗೆ ಹಾಕಿ. ಮನೆಗೆ ಬೇಕಾದಷ್ಟು ಹಸಿಮೆಣಸಿನಕಾಯಿ, ಟಮೋಟ ಕಿತ್ತುಕೊಳ್ಳುವಷ್ಟರಲ್ಲಿ ತಾತನೂ ಗಾಡಿ ಕಟ್ಟಿ ರೆಡಿ ಇರ್ತಿದ್ರು. ಈಗ ನನಗೂ ಅಕ್ಕನಿಗೂ ಜಗಳ ನಾನು ಗಾಡಿ ಹತ್ತುತೀನಿ ನೀನು ಉಳಿದಿರೋ ಹಸುಗಳನ್ನು ಕರ್ಕೊಂಡ್ಬಾ. ಇಲ್ಲ ನೀನು ಅಂತ. ನಮ್ಮ ವಾದ ಕೇಳೋಕಾಗದೆ ತಾತ ಇಬ್ಬರು ಸುಮ್ಮನೆ ಕುತ್ಕೋಳಿ ಅವೆ ಬರ್ತಾವೆ. ಆಂಜನೇಯನ ದೇವಸ್ಥಾನದ ಹತ್ರ ಇಬ್ರೂ ಇಳಿರಿ ಅಂತಿದ್ರು. ನಾನೋ ಶುದ್ಧ ತರಲೆ ಅಕ್ಕ ಮೊದಲು ನೀವು ಇಳಿ ಅಂತ ಹೇಳಿ ಅವರನ್ನು ಇಳಿಸಿ ನಾ ಗಾಡಿಲೆ ಇರ್ತಿದ್ದೆ. ಬೋಗಿ ಹಬ್ಬದ ದಿನ ಅಣ್ಣೆ ಹೂವು, ತುಂಬೆ ಹೂವು ತಂದು ಹಳೆಮನೆಯ (ನನ್ನ ತಾತನ ತಂದೆ-ತಾಯಿ, ಅಜ್ಜಿ-ತಾತ ಬಾಳಿದ ಮನೆ. ಹೊಸ ಮನೆ ಕಟ್ಟಿಸಿದ ನಂತರ ಆ ಮನೆಯನ್ನು ಒಂದು ಭಾಗವನ್ನು ರೂಮ್ ಮತ್ತು ಅಡುಗೆಮನೆಯನ್ನು ಉಗ್ರಾಣವಾಗಿ. ಮತ್ತೊಂದು ಭಾಗ ಹಾಲ್ ಅನ್ನು ಕೊಟ್ಟಿಗೆಯಾಗಿ ಉಪಯೋಗಿಸುತ್ತಿದ್ದಾರೆ.) ಬಾಗಿಲಿಗೆ ಸಗಣಿ ಮತ್ತು ಹೂವುಗಳಿಂದ ಅಲಂಕರಿಸುವ ಕೆಲಸ ನನ್ನದು. ಸಂಕ್ರಾಂತಿ ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಕಡಲೆಕಾಯಿ, ಅವರೆಕಾಯಿ, ಕಬ್ಬು, ತುಂಬೆ ಹೂವು ಬೇಯಿಸಲು ಒಲೆಯ ಮೇಲಿಟ್ಟು. ದೇವರ ಫೋಟೊಗಳಿಗೆಲ್ಲಾ ಹೂವು ಮುಡಿಸಿ, ದೀಪಕ್ಕೆ ಬತ್ತಿ ಹಾಕಿ ಎಣ್ಣೆ ಸುರಿದು, ಅಜ್ಜಿ ಸಿದ್ದಪಡಿಸಿದ ಬೆಲ್ಲದ ಅನ್ನದ (ಸ್ವೀಟ್ ಪೊಂಗಲ್) ನೈವೇದ್ಯ ದೇವರ ಮನೆಗೆ ತಂದಿಟ್ಟರೆ ತಾತ ಪೂಜೆ ಮಾಡುತ್ತಿದ್ದರು. ಪೂಜೆಯ ನಂತರ ಬೆಳಗಿನ ತಿಂಡಿಗೆ ಅಜ್ಜಿ ದೋಸ ಮತ್ತು ಪಿತಕಪಪ್ಪು (ಹಿತಕವರೆಕಾಳಿನಿಂದ ಮಾಡುವ ಸಿಹಿ) ಬಡಿಸುತ್ತಿದ್ದಳು.
ತಿಂಡಿ ತಿಂದು ನಾನು,ತಾತ,ಮಾವ ಕೆರೆದಂಡೆಯಲ್ಲಿ ನಡೆಯುವ ಕೋಳಿ ಪಂದ್ಯ, ಗಾಳಿಪಟ ಹಾರಿಸುವುದನ್ನು ನೋಡಲು ಹೋಗುತ್ತಿದ್ದೆ. ಮನೆಗೆ ಬಂದ ಮೇಲೆ ಗಾಳಿಪಟ ಬೇಕು ಅಂತ ಹಠ ಮಾಡಿದಾಗ ಎದುರು ಮನೆಯ ಶಾಂತಣ್ಣ ಬಣ್ಣಬಣ್ಣದ ಪೇಪರ್ಗಳಿಂದ ದೊಡ್ಡದಾದ ಗಾಳಿಪಟ ಮಾಡಿ ತಂದು ಕೊಡುತ್ತಿದ್ದ. ಬೆಳಗ್ಗಿನಿಂದ ಸಂಜೆವರೆಗೂ ಕಬ್ಬು ಕೈಯಲ್ಲಿ ಇರುತ್ತಲೇ ಇತ್ತು. ಕಬ್ಬು ತಿಂದು ನೀರು ಕುಡಿಬೇಡ ಅಂದರೆ ಕೇಳದೆ ಕಬ್ಬು ತಿಂದು ನೀರು ಕುಡಿದು ನಾಲಿಗೆ ಒಡೆಸಿಕೊಂಡು ಉರಿ ಅಂತ ಅತ್ತಿದ್ದೆ. ಮಧ್ಯಾನ್ಹ ಮೂರರ ಆಸುಪಾಸಿಗೆ ಮನೆಗೆ ಬರುತ್ತಿದ್ದ ಹಸುಗಳಿಗೆ ಸಿಂಗಾರ, ಬಣ್ಣ ಬಣ್ಣದ ಬಲೂನ್ಗಳನ್ನು ಕೊಂಬುಗಳಿಗೆ ಅಂಟಿಸಿ, ಕರಿ ಬಣ್ಣದ ಹಗ್ಗದಲ್ಲಿರುತ್ತಿದ ಶಂಖ ಮತ್ತು ಘಂಟೆಗಳ ಹಾರ ಹಾಕಿ, ಹೂವಿನ ಹಾರದಿಂದ ಸಿಂಗರಿಸಿದರೆ ಗೌರಿ ಕತ್ತು ಕೊಂಕಿಸಿ ಹಾಕಿದ ಹಾರವನ್ನು ಮೇಯುತ್ತಿದ್ದಳು. ಸಂಜೆ ಮನೆಯ ಎಲ್ಲರೂ ಹಸುಗಳ ಸಮೇತ ಊರ ಹೊರಗಿನ ದೇವಸ್ದಾನಕ್ಕೆ ಹೋಗಿ ಪೂಜೆ ಮಾಡಿಸಿದ ನಂತರ ಮಾವ ಮತ್ತು ತಾತ ಎಲ್ಲಾ ಹಸುಗಳನ್ನು ಬೆಂಕಿಯಿಂದ ಹಾರಿಸುತ್ತಾರೆ.
(ತಮ್ಮ ಪಶು ಸಂಪತ್ತಿನ ಪ್ರದರ್ಶನ ಒಂದು ಕಡೆಯಾದರೆ, ಚಳಿಗಾಲದಲ್ಲಿ ಹಸುಗಳ ರಕ್ತ ಹೀರುವ ಜಿಗಣೆಯ ಜಾತಿಯ ಹುಳುವೊಂದು ಹಸುಗಳ ಮೈಹೊಕ್ಕಿ ರಕ್ತ ಹೀರುತ್ತವೆ. ಹಸುವಿನ ಮೈಗೆ ಕಾವು ತಾಗುತ್ತಲೇ ಈ ಹುಳುಗಳು ಉದುರಿ ಬೀಳುತ್ತವೆ.) ಮನೆಗೆ ಬಂದು ಎಲ್ಲರಿಗೂ ಎಳ್ಳು ಬೆಲ್ಲ ಹಂಚಿ. ಯಾವುದಾದರೊಂದು ಸಿನೆಮಾ ಸ್ಪೆಷಲಿ ದೇವರ ಸಿನೆಮಾ ನೋಡಿ ಹಬ್ಬದೂಟ ಮಾಡಿದರೆ ಆ ವರುಷದ ಸಂಕ್ರಾಂತಿ ಸಂಪೂರ್ಣವಾಗುತ್ತಿತ್ತು.
ಅರೆರೆ ಹಬ್ಬಕ್ಕಿನ್ನ ನಾಲ್ಕೆದಿನ ಇರೋದು ನೀನು ಪ್ರತಿಮಾ ಇವತ್ತು ಎರಡನೇ ತುಂಡಲ್ಲಿರೋ ಅವರೆಕಾಯಿ ಪೂರ್ತಿ ಬಿಡಿಸಿಕೊಂಡು ಬನ್ನಿ. ನಾಳೆ ತೆಂಗಿನ ತೋಟದಲ್ಲಿ ಇರುವುದನ್ನು ತರುವಿರಂತೆ. ಮೆಣಕಾಲೆತ್ತರಕ್ಕೆ ಬೆಳೆದು ನಿಂತ ಅವರೆ ತೋಟ. ಬೆಳಗಿನ ಮಂಜಿನ ಹನಿಗಳು ಮಿರಮಿರನೆ ಮಿಂಚುತ್ತಿವೆ. ಅವರೆಕಾಯಿಗಿಂತ ಅವರೆ ಹೂವಿಗೆ ತೊಂದರೆಯಾಗದಂತೆ ಕಾಯಿ ಕೊಯ್ಯುವುದು ಕರಗತವಾಗಿರಬೇಕು ಇಲ್ಲವಾದಲ್ಲಿ ಎರಡನೇ ಸಲಕ್ಕೆ ಕಾಯಿ ಕಮ್ಮಿಯಾಗುತ್ತದೆ.
ಆಹಾ...... ಎಂಥಾ ಸೊಗಡು, ಎರಡು ಕಾಯಿ ಕೊಯ್ಯುತ್ತಲೇ ದ್ರವರೂಪದ ಅಂಟು ಕೈಗೆಲ್ಲಾ ಅಂಟಿ ಮತ್ತೇರಿಸುವುದು ಸುಳ್ಳಲ್ಲ. ಅವರೆಹೂವಿನೊಡನೆ ಜೇನುನೋಣಗಳ ಸರಸ ಕಣ್ಣಿಗೆ ಹಬ್ಬ. ಎರಡೂ ತೋಟದಲ್ಲಿನ ಕಾಯಿ ನಾಲ್ಕೈದು ಮಕ್ಕರಿಯಾಗಿದೆ, ಎರಡು ಮೊರಗಳಲ್ಲಿ ಕಾಯಿ ಪಕ್ಕದ ಮನೆಯ ರಾಧಕ್ಕ ಮತ್ತು ಜಯಮ್ಮನ ಪಾಲು. ಉಳಿದುದರಲ್ಲಿ ಹಬ್ಬದ ದಿನ ಬೇಯಿಸಲು, ಹಿತಕವರೆಕಾಳಿಗೆ ಮತ್ತು ಹಣ್ಣಾದವುಗಳನ್ನು ಅವರೆಕಾಳಿಗೆ ಅಂತ ವಿಂಗಡಿಸಿ, ರಾತ್ರಿ ಮನೆಯ ಹೊರಗೆ ಮಂಜಿನಲ್ಲಿಡುವುದು ಅಜ್ಜಿ ಕೆಲಸ.
ಹಿಂದಿನ ದಿನದ ಮಧ್ಯಾನಕ್ಕೆಲ್ಲ ಸೇವಂತಿಗೆ ಹೂವು, ಚೆಂಡು ಹೂಗಳನ್ನು ಹೊತ್ತ ಚೀಲಗಳು ಊಟಕ್ಕೆ ಬಂದ ನಮ್ಮ ಜೊತೆಗೆ ಬರುತ್ತಿದ್ದವು. ಸಂಜೆಗೆಲ್ಲಾ ತರೆಹೆವಾರಿ ಹೂವಿನ ಮಾಲೆಗಳು ಸಿದ್ದವಾಗಿರುವುದರ ಜೊತೆಗೆ, ಬಾಗಿಲಿಗೆ, ಗಾಡಿಗೆ, ದೇವರಿಗೆ ಅಂತ ವಿಗಂಡಿಸಿ ಬೇರೆ ಬೇರೆ ಒದ್ದೆ ಬಟ್ಟೆಯಲ್ಲಿ ಸುತ್ತಿಟ್ಟಾಗಿರುತ್ತಿತ್ತು. ಆಲೆಮನೆಯ ಶಂಕ್ರಣ್ಣನ ತೋಟದಿಂದ ಕಬ್ಬು ತರಲು ಅಜ್ಜಿ ಕಳುಹಿಸಿದಳಾದರೂ, ನೀರಲ್ಲಿ ಒಬ್ಬಳೇ ಆಡ್ತಾ ಕೂರಬೇಡ ಎನ್ನುವ ಎಚ್ಚರಿಕೆಯನ್ನೂ ಕೊಟ್ಟಿರುತ್ತಿದ್ದಳು. ಹಲಸಿನ ಮರದ ತೋಟದಿಂದ ಕೆರೆಯ ಕಡೆಯ ದಾರಿ ಹಿಡಿದು ಮಧ್ಯೆ ಸಿಗುವ ಎಲಚೆ ಮರಕ್ಕೆ ಕಲ್ಲು ಹೊಡೆದು ಒಂದಷ್ಟು ಹಣ್ಣನ್ನು ಜೊತೆಗಿರುವ ಟವೇಲ್ನಲ್ಲಿ ಕಟ್ಟಿ.
ಕೆರಯಲ್ಲೊಂದಷ್ಟು ಹೊತ್ತು ಆಟವಾಡಿ, ರಾಮಣ್ಣನ್ನ ತೆಂಗಿನ ತೋಟ ದಾಟುತ್ತಿದ್ದಂತೆ ಒಂದಷ್ಟು ದೂರ ದಟ್ಟ ಕಾನನದಂಥ ದಾರಿ, ಅಲ್ಲಿಗೆ ಬರುತ್ತಲೇ ಆ ಚಿತ್ರ-ವಿಚಿತ್ರ ಕೀಟಗಳ ಸದ್ದು ಕೇಳಿ ಮತ್ತೂ ಭಯಭೀತಳಾಗಿ ಓಡುತ್ತಿದ್ದೆ. ಶಂಕ್ರಣ್ಣನ ಆಲೆಮನೆಗೆ ಹೋಗಿ. ಎಳೆಯ ಪಾಕದಲ್ಲಿದ್ದ ಬೆಲವನ್ನು ಮೂರ್ನಾಲ್ಕು ಜೋಳದ ಕಡ್ಡಿಗೆ ಸುತ್ತಿಕೊಡುತ್ತಿದ್ದ ಬೆಲ್ಲವನ್ನು ತಿಂದು ಬೇಕಾದಷ್ಟು ಕಬ್ಬು ತೆಗೆದುಕೊಂಡು ನೀಲಗಿರಿ ತೋಪಿನ ಮೂಲಕ ಚಿಕ್ಕತಾತನೊಡನೆ ಬಂದು ಹಲಸಿನ ಮರದ ತೋಟದಲ್ಲಿರುತ್ತಿದ್ದ ಎತ್ತಿನ ಗಾಡಿಗೆ ಕಬ್ಬು ಎಸೆದು.ನುಗ್ಗೆಮರವೇರಿ ಅದಕ್ಕೆ ತಾಗಿಕೊಂಡಂತಿರುವ ತೆಂಗಿನಮರದಿಂದ ಹತ್ತಾರು ಎಳನೀರು ಬೀಳಿಸಿ, ನಾನು ಅಕ್ಕ (ಮಾವನ ಹೆಂಡತಿ, ದೊಡ್ಡಪ್ಪನ ಮಗಳೇ ಆಗಿದ್ದುದ್ದರಿಂದ ಅಕ್ಕ ಅಂತ್ಲೇ ಕರೀತಿದ್ದೆ) ಎರಡು ಎಳನೀರು ಕುಡಿದು. ಉಳಿದದ್ದನ್ನು ಗಾಡಿಗೆ ಹಾಕಿ. ಮನೆಗೆ ಬೇಕಾದಷ್ಟು ಹಸಿಮೆಣಸಿನಕಾಯಿ, ಟಮೋಟ ಕಿತ್ತುಕೊಳ್ಳುವಷ್ಟರಲ್ಲಿ ತಾತನೂ ಗಾಡಿ ಕಟ್ಟಿ ರೆಡಿ ಇರ್ತಿದ್ರು. ಈಗ ನನಗೂ ಅಕ್ಕನಿಗೂ ಜಗಳ ನಾನು ಗಾಡಿ ಹತ್ತುತೀನಿ ನೀನು ಉಳಿದಿರೋ ಹಸುಗಳನ್ನು ಕರ್ಕೊಂಡ್ಬಾ. ಇಲ್ಲ ನೀನು ಅಂತ. ನಮ್ಮ ವಾದ ಕೇಳೋಕಾಗದೆ ತಾತ ಇಬ್ಬರು ಸುಮ್ಮನೆ ಕುತ್ಕೋಳಿ ಅವೆ ಬರ್ತಾವೆ. ಆಂಜನೇಯನ ದೇವಸ್ಥಾನದ ಹತ್ರ ಇಬ್ರೂ ಇಳಿರಿ ಅಂತಿದ್ರು. ನಾನೋ ಶುದ್ಧ ತರಲೆ ಅಕ್ಕ ಮೊದಲು ನೀವು ಇಳಿ ಅಂತ ಹೇಳಿ ಅವರನ್ನು ಇಳಿಸಿ ನಾ ಗಾಡಿಲೆ ಇರ್ತಿದ್ದೆ. ಬೋಗಿ ಹಬ್ಬದ ದಿನ ಅಣ್ಣೆ ಹೂವು, ತುಂಬೆ ಹೂವು ತಂದು ಹಳೆಮನೆಯ (ನನ್ನ ತಾತನ ತಂದೆ-ತಾಯಿ, ಅಜ್ಜಿ-ತಾತ ಬಾಳಿದ ಮನೆ. ಹೊಸ ಮನೆ ಕಟ್ಟಿಸಿದ ನಂತರ ಆ ಮನೆಯನ್ನು ಒಂದು ಭಾಗವನ್ನು ರೂಮ್ ಮತ್ತು ಅಡುಗೆಮನೆಯನ್ನು ಉಗ್ರಾಣವಾಗಿ. ಮತ್ತೊಂದು ಭಾಗ ಹಾಲ್ ಅನ್ನು ಕೊಟ್ಟಿಗೆಯಾಗಿ ಉಪಯೋಗಿಸುತ್ತಿದ್ದಾರೆ.) ಬಾಗಿಲಿಗೆ ಸಗಣಿ ಮತ್ತು ಹೂವುಗಳಿಂದ ಅಲಂಕರಿಸುವ ಕೆಲಸ ನನ್ನದು. ಸಂಕ್ರಾಂತಿ ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಕಡಲೆಕಾಯಿ, ಅವರೆಕಾಯಿ, ಕಬ್ಬು, ತುಂಬೆ ಹೂವು ಬೇಯಿಸಲು ಒಲೆಯ ಮೇಲಿಟ್ಟು. ದೇವರ ಫೋಟೊಗಳಿಗೆಲ್ಲಾ ಹೂವು ಮುಡಿಸಿ, ದೀಪಕ್ಕೆ ಬತ್ತಿ ಹಾಕಿ ಎಣ್ಣೆ ಸುರಿದು, ಅಜ್ಜಿ ಸಿದ್ದಪಡಿಸಿದ ಬೆಲ್ಲದ ಅನ್ನದ (ಸ್ವೀಟ್ ಪೊಂಗಲ್) ನೈವೇದ್ಯ ದೇವರ ಮನೆಗೆ ತಂದಿಟ್ಟರೆ ತಾತ ಪೂಜೆ ಮಾಡುತ್ತಿದ್ದರು. ಪೂಜೆಯ ನಂತರ ಬೆಳಗಿನ ತಿಂಡಿಗೆ ಅಜ್ಜಿ ದೋಸ ಮತ್ತು ಪಿತಕಪಪ್ಪು (ಹಿತಕವರೆಕಾಳಿನಿಂದ ಮಾಡುವ ಸಿಹಿ) ಬಡಿಸುತ್ತಿದ್ದಳು.
ತಿಂಡಿ ತಿಂದು ನಾನು,ತಾತ,ಮಾವ ಕೆರೆದಂಡೆಯಲ್ಲಿ ನಡೆಯುವ ಕೋಳಿ ಪಂದ್ಯ, ಗಾಳಿಪಟ ಹಾರಿಸುವುದನ್ನು ನೋಡಲು ಹೋಗುತ್ತಿದ್ದೆ. ಮನೆಗೆ ಬಂದ ಮೇಲೆ ಗಾಳಿಪಟ ಬೇಕು ಅಂತ ಹಠ ಮಾಡಿದಾಗ ಎದುರು ಮನೆಯ ಶಾಂತಣ್ಣ ಬಣ್ಣಬಣ್ಣದ ಪೇಪರ್ಗಳಿಂದ ದೊಡ್ಡದಾದ ಗಾಳಿಪಟ ಮಾಡಿ ತಂದು ಕೊಡುತ್ತಿದ್ದ. ಬೆಳಗ್ಗಿನಿಂದ ಸಂಜೆವರೆಗೂ ಕಬ್ಬು ಕೈಯಲ್ಲಿ ಇರುತ್ತಲೇ ಇತ್ತು. ಕಬ್ಬು ತಿಂದು ನೀರು ಕುಡಿಬೇಡ ಅಂದರೆ ಕೇಳದೆ ಕಬ್ಬು ತಿಂದು ನೀರು ಕುಡಿದು ನಾಲಿಗೆ ಒಡೆಸಿಕೊಂಡು ಉರಿ ಅಂತ ಅತ್ತಿದ್ದೆ. ಮಧ್ಯಾನ್ಹ ಮೂರರ ಆಸುಪಾಸಿಗೆ ಮನೆಗೆ ಬರುತ್ತಿದ್ದ ಹಸುಗಳಿಗೆ ಸಿಂಗಾರ, ಬಣ್ಣ ಬಣ್ಣದ ಬಲೂನ್ಗಳನ್ನು ಕೊಂಬುಗಳಿಗೆ ಅಂಟಿಸಿ, ಕರಿ ಬಣ್ಣದ ಹಗ್ಗದಲ್ಲಿರುತ್ತಿದ ಶಂಖ ಮತ್ತು ಘಂಟೆಗಳ ಹಾರ ಹಾಕಿ, ಹೂವಿನ ಹಾರದಿಂದ ಸಿಂಗರಿಸಿದರೆ ಗೌರಿ ಕತ್ತು ಕೊಂಕಿಸಿ ಹಾಕಿದ ಹಾರವನ್ನು ಮೇಯುತ್ತಿದ್ದಳು. ಸಂಜೆ ಮನೆಯ ಎಲ್ಲರೂ ಹಸುಗಳ ಸಮೇತ ಊರ ಹೊರಗಿನ ದೇವಸ್ದಾನಕ್ಕೆ ಹೋಗಿ ಪೂಜೆ ಮಾಡಿಸಿದ ನಂತರ ಮಾವ ಮತ್ತು ತಾತ ಎಲ್ಲಾ ಹಸುಗಳನ್ನು ಬೆಂಕಿಯಿಂದ ಹಾರಿಸುತ್ತಾರೆ.
(ತಮ್ಮ ಪಶು ಸಂಪತ್ತಿನ ಪ್ರದರ್ಶನ ಒಂದು ಕಡೆಯಾದರೆ, ಚಳಿಗಾಲದಲ್ಲಿ ಹಸುಗಳ ರಕ್ತ ಹೀರುವ ಜಿಗಣೆಯ ಜಾತಿಯ ಹುಳುವೊಂದು ಹಸುಗಳ ಮೈಹೊಕ್ಕಿ ರಕ್ತ ಹೀರುತ್ತವೆ. ಹಸುವಿನ ಮೈಗೆ ಕಾವು ತಾಗುತ್ತಲೇ ಈ ಹುಳುಗಳು ಉದುರಿ ಬೀಳುತ್ತವೆ.) ಮನೆಗೆ ಬಂದು ಎಲ್ಲರಿಗೂ ಎಳ್ಳು ಬೆಲ್ಲ ಹಂಚಿ. ಯಾವುದಾದರೊಂದು ಸಿನೆಮಾ ಸ್ಪೆಷಲಿ ದೇವರ ಸಿನೆಮಾ ನೋಡಿ ಹಬ್ಬದೂಟ ಮಾಡಿದರೆ ಆ ವರುಷದ ಸಂಕ್ರಾಂತಿ ಸಂಪೂರ್ಣವಾಗುತ್ತಿತ್ತು.

ಗ್ರಾಮೀಣ ಸೊಗಡಿನ ಸಂಕ್ರಾಂತಿಯ ಅನುಭವ ಸೋನೆ ಅವರೆಕಾಯಿಯ ರುಚಿಯಂತೆ ಇದೆ, ಬಾಲ್ಯದ ನೆನಪುಗಳು ಹಾಗೆ ಅಮೂಲ್ಯವಾದವು , ಅವುಗಳನ್ನು ನಮ್ಮ ಯಾಂತ್ರಿಕ ಬದುಕಿನಲ್ಲಿ ಅನಿವಾರ್ಯವಾಗಿ ಕಳೆದುಕೊಂಡು , ನೆನಪುಗಳಲ್ಲಿ ಹುಡುಕುವ ಪ್ರಯತ್ನ ಮಾಡ್ತಾ ಇದ್ದೇವೆ. ಸುಂದರ ನಿರೂಪಣೆ ಪುಟ್ಟಕ್ಕ ಸಂಕ್ರಾಂತಿಯ ಹಬ್ಬವನ್ನು ಕಣ್ಣ ಮುಂದೆ ತಂದಿಟ್ಟ ನಿನಗೆ ಶುಭವಾಗಲಿ.
ReplyDelete