ಒಂಟಿ ಸಲಗ
ಪ್ರತಿದಿನದಂತೆ ಆ ದಿನಾನೂ ಡೈರಿಗೆ ಹಾಲು ಕೊಟ್ಟು ಬಂದವಳು. ಹಂಡೆ ತುಂಬಾ ನೀರು ತುಂಬಿ, ಉರಿ ಹಾಕುತ್ತಿದ್ದೆ. ಮಾವ ಮಾರ್ಕೆಟ್ ಗೆ ಹೋಗಿದ್ದರಿಂದ ಅಜ್ಜಿ ಗುಡ್ಡದ ಕೆಳಗಿನ ಸೇವಂತಿಗೆ ತೋಟದ ಮೋಟರ್ ಆನ್ ಮಾಡಿ ಹಾಗೆ ನಾಲ್ಕೈದು ಹೀರೆಕಾಯಿ ಕೊಯ್ದು ತಾ ಎಂದಳು. ನನ್ನದೇ ಲೋಕದಲ್ಲಿ ವಿಹರಿಸುತ್ತ ಮಾವಿನ ತೋಪಿನ ದಾರಿಯಲ್ಲಿ ನಡೆಯುತ್ತಿದ್ದೆ, ದಾರಿಯಲ್ಲಿ ಸಿಕ್ಕ ವಾಸು (ಮಾವನ ಸ್ನೇಹಿತ) "ನಿಮ್ ಹಲಸಿನ ಮರದ ತೋಟಕ್ಕೆ ರಾತ್ರಿ ಒಂಟಿ ಆನೆ ಬಂದಿತ್ತು, ಕೆಳಗಿದ್ದ ಹಲಸಿನ ಮರದ ಕೊಂಬೆ ಮತ್ತೆ ನಾಲ್ಕು ಪರಂಗಿ ಮರ ಮುರಿದೈತೆ. ಆ ಕಡೆ ಹೋಗ್ಬೇಡ ಹುಷಾರು ಎಂದ. ಸರಿ ಮಾವ ಮನೇಲಿಲ್ಲ ಸೇವಂತಿಗೆ ತೋಟಕ್ಕೆ ನೀರು ಬಿಟ್ಟು ಬರ್ತೀನಿ ಆ ಕಡೆ ಹೋಗಲ್ಲ ಅಂತ್ಹೇಳಿ ತೋಟದ ಕಡೆ ಹೊರಟೆ.
ಅದ್ಯಾಕೋ ಸಣ್ಣನಡುಕ ಶುರುವಾಯಿತು ಆದರೂ ಹೆದರದೆ "ಇದೇನು ಮೊದಲ ಸಲ ಅಲ್ಲ ಅಲ್ವಾ ನಮ್ಮ ತೋಟಕ್ಕೆ ಆನೆ ಬಂದಿದ್ದು. ಹಾಗೆ ನೋಡಿದ್ರೆ ಇಷ್ಟು ಹೊತ್ತಿಗೆ ವಾಸಿ ಬಂದರು ಅಂದ್ರೆ ಆನೆ ವಾಪಸ್ ಹೋಗಿರುತ್ತೆ. ನಾನ್ಯಾಕೆ ಭಯ ಪಡಬೇಕು. ಅಲ್ಲದೆ ಹಲಸಿನ ಮರದ ತೋಟ ಇರೋದು ಮೈನ್ ರೋಡಲ್ಲಿ ಆದ್ರೆ ಸೇವಂತಿಗೆ ತೋಟ ಇರೋದು ಅದಕ್ಕಿಂತ ಅರ್ಧ ಕಿಲೋ ಮೀಟರ್ ದೂರ ಅಷ್ಟಕ್ಕೂ ಏನಾದರೂ ತೊಂದರೆ ಆದ್ರೆ ನಜೀರಣ್ಣ ಪಕ್ಕದಲ್ಲೆ ಇರ್ತಾನೆ" ಅಂತ ನನಗೆ ನಾನೆ ಲೆಕ್ಕಾಚಾರ ಹಾಕಿಕೊಂಡು ನಡೆಯುತ್ತಿದ್ದೆ ಅಷ್ಟರಲ್ಲಾಗಲೇ ತೋಟದ ಹತ್ತಿರ ಬಂದಿದ್ದೆ. ಆಗ ತಾನೆ ಚಳಿಗಾಲ ಶುರುವಾಗಿದ್ದರಿಂದ (ಸೆಪ್ಟೆಂಬರ್ ತಿಂಗಳು) ಬದುವಿನಲ್ಲಿ ಅಣಬೆ ಇದೆಯಾ ಅಂತ ನೋಡುತ್ತ ಗುಡ್ಡದ ಕೆಳಗೆ ಬಂದೆ. ಮೋಟರ್ ನ ಬೀಗ ತೆಗೆದು ಸ್ವಿಚ್ ಆನ್ ಮಾಡಿ ಐದು ನಿಮಿಷದ ನಂತರ ಗುಡ್ಡದ ಮೇಲಿನ ಕಾಲುವೆಯಿಂದ ನೀರು ಹರಿಯಲಾರಂಭಿಸಿತು. ಮತ್ತೆ ಮೋಟರ್ ಬೀಗ ಹಾಕಿ ಎರಡು ಬದುಗಳ ನಡುವೆ ಖಾಲಿಯಾಗಿರುವ ಕಾಲುವೆಯಲ್ಲಿ ಕಾಲಿಡಬೇಕು ಏನೋ ಸರಿದಂತಯ್ತು. ನೋಡಿದರೆ ಕಾಲ ಕೆಳಗೆ ಗೋಧಿ ಬಣ್ಣದ ಮಾರುದ್ದದ ನಾಗರ ಹಾವು ಹರಿಯುತ್ತಿದೆ. ಎದೆ ನಡುಕ ಹೆಚ್ಚಾಯಿತು. ಕಾಲು ಹಿಂತೆಗೆತಲು ಶಕ್ತಿಯಿಲ್ಲದವಳಂತೆ ನಿಂತು ಬಿಟ್ಟೆ. ಗೋಧಿ ಬಣ್ಣದ ಹಾವು ಸರಿಯಿತೆಂದರೆ ಕರಿ ನಾಗರ ಇಲ್ಲೆ ಎಲ್ಲೊ ಇದೆ ಎಂಬುದು ತಕ್ಷಣ ಹೊಳೆಯಿತು (ಈ ಎರಡು ಹಾವುಗಳ ಜೋಡಿಯನ್ನು ಬಹಳ ಸಲ ಮರಗಳ ಮೇಲೆ, ಹೀರೆಕಾಯಿ ತೋಟದ ಬದುವಿನ ಮೇಲೆ ನೋಡಿದ್ದೆ. ಆಗೆಲ್ಲಾ ಅಜ್ಜಿ ಅಥವಾ ತಾತ ಹಾವುಗಳೆರಡರ ಮಿಲನದ ಸಮಯದಲ್ಲಿ ಅವುಗಳ ಕಣ್ಣಿಗೆ ಬೀಳಬಾರದು. ನಾವು ಅವುಗಳನ್ನು ನೋಡಬಾರದು ಎಂದಿದ್ದರು ಕಾರಣ ಇಂದಿಗೂ ತಿಳಿದಿಲ್ಲ) ತಡಮಾಡದೆ ಓಟ ಕಿತ್ತೆ.
ಗುಡ್ಡದ ಮೇಲೆ ಬರುತ್ತಿದ್ದಂತೆ ಏನೋ ಮುರಿದ ಸದ್ದು ಮತ್ತೂ ಭಯಭೀತಳಾದೆ ಹೌದು ಅದೇ ಒಂಟಿ ಸಲಗ ಗುಡ್ಡದ ಮೇಲಿನ ತೋಟದಲ್ಲಿದ್ದ ಬಿದಿರು ಮೆಳೆಯಲ್ಲಿ ಕೊಂಬೆ ಮುರಿಯುತ್ತಿದೆ. ತುಂಬಾ ಸಲ ಮಾವ ಹೇಳಿದ್ದು ನೆನಪಾಯಿತು. ಹಲಸಿನ ಮರದ ತೋಟದಲ್ಲಿ ಆನೆ ಕಂಡರೆ ಚೌಡರೆಡ್ಡಿಯವರ ಪಂಪ್ ಸೆಟ್ಗೆ ಹೋಗು. ಅಕಸ್ಮಾತ್ ಗುಡ್ಡದ ತೋಟದಲ್ಲಿ ಕಂಡರೆ ನಜೀರ್ ಮನೆಗೆ ಹೋಗು ಅಂದಿದ್ದರು. ಆದರೆ ಈಗ ನಜೀರ್ ಮನೆಗೆ ಹೋಗುವ ಗೇಟ್ ಕಡೆ ಹೋಗಬೇಕಾದರೆ ಆನೆ ಇರುವಲ್ಲಿಂದಲೇ ಹೋಗಬೇಕು. ಮತ್ತೆ ಗುಡ್ಡದ ಕೆಳಗೆ ಬಂದು ಪಕ್ಕದ ಸೇಬಿನ ತೋಟದ ಬೇಲಿ ನುಗ್ಗಿ ನಜೀರ್ ಮನೆ ಬಾಗಿಲು ಬಡಿದೆ. ಅವರ ಮನೆಯ ನಾಯಿಗಳ ದಂಡು ನನ್ನಮೇಲೆರಗುವಂತೆ ಬೊಗಳಾರಂಭಿಸಿತು. ಮೊದಲೆ ಹೆದರಿದ್ದವಳು ಅಳಲು ಶುರು ಮಾಡಿದೆ. ನನ್ನ ದನಿ ಕೇಳಿದ ತಕ್ಷಣ ಬಾಗಿಲು ತೆಗೆದು ನನ್ನನ್ನು ಒಳ ಕರೆದುಕೊಂಡು ತಕ್ಷಣ ಬಾಗಿಲು ಮುಚ್ಚಿದರು. ನಜೀರ್ ಮಾವನಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಇಷ್ಟೆಲ್ಲಾ ಆದಾಗ ಸಮಯ ಬೆಳಿಗ್ಗೆ ಏಳೂವರೆ. ಮಧ್ಯಾಹ್ನ ಎರಡು ಗಂಟೆಗೆ ನಜೀರ್ ಮನೆಯಿಂದ ನಮ್ಮ ಮನೆಗೆ ಬಂದೆ. ಮೊದಲ ಸಲ ಬಹಳ ಹೆದರಿದ್ದೆ ಅದಕ್ಕೆ ಇರಬೇಕು ಜ್ವರ ಬಂದಿತ್ತು.
ಮೊದಲಿನಿಂದಲೂ ಅಜ್ಜಿ ನನ್ನನ್ನು ಹೇಡಿಯಾಗಿ ಬೆಳೆಸಿರಲಿಲ್ಲ. ಪ್ರತಿದಿನ ಬೆಳಿಗ್ಗೆ ಐದೂವರೆಗೆ ಹೊರಟು ಪಕ್ಕದೂರಿನ ಡೈರಿಗೆ ಹಾಲು ಹಾಕಿ ಆರೂಕಾಲಿಗೆ ಮತ್ತೆ ಮನೆಗೆ ಬರುತ್ತಿದ್ದೆ. ಒಂಭತ್ತು ವರ್ಷಕ್ಕೆ ಆ ಧೈರ್ಯ ನನ್ನಲ್ಲಿ ತುಂಬಿದ್ದರು ನನ್ನಜ್ಜಿ. ತಾತನ ಜೊತೆ ಆಸ್ಪತ್ರೆಗೆ ಹೋಗಿ ಬಂದೆ. ಜ್ವರದ ತಾಪಕ್ಕೆ ಮೂರ್ನಾಲ್ಕು ಸಲ ವಾಂತಿಯಾಯ್ತು. ನಾನು ಮಾತ್ರೆ ಬೇಡವೆಂದು ಹಠ ಹಿಡಿದೆ. ನಾನು ಮಾತ್ರೆ ತೆಗೆದುಕೊಳ್ಳಲಿ ಎಂದು ಅಜ್ಜಿ "ನಾಳೆ ನಿಮ್ಮ ಅಮ್ಮ ಬರ್ತಿದಾಳೆ. ನನ್ನ ಮಾತು ಕೇಳಿದಿದ್ದ ಮೇಲೆನಿಮ್ಮ ಅಮ್ಮನ ಜೊತೆ ಊರಿಗೆ ಹೋಗು." ಎಂದಾಗ ಅಳುವೇ ಬಂದಿತ್ತು. ಮರುದಿನ ಬೆಳಿಗ್ಗೆ ಅಮ್ಮ ಬಂದಾಗ ನಿಜವಾಗಿಯೂ ಅಜ್ಜಿ ನನ್ನ ಅಮ್ಮನ ಜೊತೆ ಊರಿಗೆ ಕಳುಹಿಸುತ್ತಾಳೆ ಎಂದು ಮನೆಯಲ್ಲಿ ಹಠ ಹಿಡಿದು ರಂಪ ಮಾಡಿ ತಾತನ ಹಿಂದೆ ಅವಿತಿದ್ದ ನೆನಪು ಹದಿಮೂರು ವರ್ಷಗಳಾದರೂ ಇನ್ನೂ ಹಚ್ಚ ಹಸಿರಾಗಿ ಉಳಿದಿದೆ. ಆಗಾಗ ಕನಸಾಗಿ ಕಾಡುವ ಈ ಮಧುರ ನೆನಪನ್ನು ಅಕ್ಷರ ರೂಪಕ್ಕಿಳಿಸಲು ಪ್ರೇರೆಪಿಸಿದ್ದೆ 3K ತಂಡದ ಇಂದಿನ ನಮ್ಮ ಚಿತ್ರ ನಿಮ್ಮ ಕವನ ಶೀರ್ಷಿಕೆಯ ಚಿತ್ರ.

Comments
Post a Comment