ಟೆಡಿಬೇರ್

ಹುಡುಗಿಯರಿಗೆ ಟೆಡಿಬೇರ್ ಅಂದ್ರೆ ಯಾಕೆ ಅಷ್ಟೊಂದು ಇಷ್ಟ ??
ಹೀಗೊಂದು ಪ್ರಶ್ನೆ ಕಳೆದ ಶುಕ್ರವಾರ ಸಹೋದ್ಯೋಗಿ ಒಬ್ಬರು ಕೇಳಿದ್ರು. ಸ್ವಲ್ಪ ತಬ್ಬಿಬ್ಬಾದೆ,  ಉತ್ತರಿಸದೆ  ಒಂದು ಮುಗುಳ್ನಕ್ಕು ಸುಮ್ಮನಾದೆ. (ತುಂಬಾ ಸಲ ಉತ್ತರಿಸುವ ಮನಸ್ಸಾಗದಿದ್ರೆ, ನಾನು ಕೊಡೊ ಉತ್ತರ ಅನಗತ್ಯ ವಾದ-ವಿವಾದಕ್ಕೆ ಮುನ್ನುಡಿಯಾಗುತ್ತೆ ಅನ್ನುವುದಾದರೆ  ಒಂದು ಮುಗುಳ್ನಕ್ಕು ಸುಮ್ಮನಾಗುತ್ತೇನೆ.)
ಹತ್ತು ವರ್ಷದೊಳಗಿನ ಮಕ್ಕಳಿಗೆ ಇದು ಕೇವಲ ಆಟವಾಡುವ ವಸ್ತು. ಟಿನೇಜ್ ಹುಡುಗಿಯರಿಗೊ ಟೆಡಿಬೇರ್ ಅನ್ನೋದು ಪ್ರತಿಷ್ಟೆಯ ವಿಷಯ. ಎಷ್ಟು ಹೆಚ್ಚು ಬೊಂಬೆಗಳಿವೆಯೊ ಅಷ್ಟು ಹೆಮ್ಮೆ. ಇನ್ನೂ ಹುಡುಗರಿಗೊ ತಮ್ಮ ಹುಡುಗಿಯ ಮನವೊಲಿಸಿಕೊಳ್ಳುವ ಅತ್ಯುತ್ತಮ ಮಾರ್ಗ. ಸೇಹಿತೆಯೋರ್ವಳು "ಮೊನ್ನೆ ರಾಗಿ ಗುಡ್ಡದ ಜಾತ್ರೆಯಲ್ಲಿ ಈ ಪಿಂಕ್ ಟೆಡ್ಡಿ ತಗೊಂಡೆ. ಎಷ್ಟು ಕ್ಯೂಟಾಗಿದೆ ನೋಡು"   ಅಂತ ವಾಟ್ಸಪ್ನಲ್ಲಿ ಫೋಟೋ ಕಳುಹಿಸಿದ್ಲು. ಈ ಕಡೆ ಆ ಫೋಟೋ ನೋಡಿದ ಮತ್ತೊಬ್ಬಳಿಗೆ ಒಳಗೊಳಗೇ ಸಂಕಟ "ಅರೇ ಎಷ್ಟು ಮುದ್ದಾಗಿದೆ. ನನಗೆ ಸಿಗಲಿಲ್ಲವಲ್ಲ" ಅಂತ.
ಇದೆಲ್ಲಾ ಸಾಮಾನ್ಯ ವಿಚಾರಗಳು ಆದ್ರೆ ಈ ಕಾರಣಗಳಿಂದ ಟೆಡಿಬೇರ್ ವಿಶೇಷ ಸ್ಥಾನಮಾನ ಪಡೆದಿಲ್ಲ ಅದಕ್ಕೆ ಬೇರೆ ಕಾರಣವೇ ಇದೆ. ಯಾವ ಹುಡುಗಿನೆ ಆಗ್ಲಿ ಟೆಡಿಬೇರ್ ನ ತನ್ನ ಸ್ವಂತ ಮಗುವಿನ ಹಾಗೆ ಮುದ್ದಿಸ್ತಾಳೆ, ತನ್ನ ಮಗುವಿನ ಹಾಗೆ ನೋಡ್ಕೊತಾಳೆ. ತನಗೆ ತಿಳಿಯದಂತೆ ತಾಯ್ತನದ ಆನಂದವನ್ನನುಭವಿಸುತ್ತಾಳೆ. ತನ್ನೆಲ್ಲಾ ನೋವು ನಲಿವಿಗೆ ತನ್ನ  ಜೊತೆಗಾರನಂತಿರುತ್ತೆ. ತನ್ನವರಿಗೂ ಹೇಳಿಕೊಳ್ಳಲಾಗದ ವಿಷಯಗಳನ್ನೂ ಈ ಟೆಡಿಬೇರ್ ಜೊತೆ ಹಂಚಿಕೊಂಡು ಹಗುರಾಗ್ತಾಳೆ. 
ತಮ್ಮ ಕುಟುಂಬವನ್ನು ಬಿಟ್ಟು ಕೆಲಸವನ್ನರಸಿ ಬೆಂಗಳೂರಿಗೆ ಬಂದ ಹೆಣ್ಮಕ್ಕಳಿಗೂ ಅಮ್ಮ / ಅಕ್ಕನ ಸ್ಥಾನ ತುಂಬುವುದು ಇದೆ ಟೆಡ್ಡಿ.  ಅಣ್ಣ-ತಮ್ಮ ಅಕ್ಕ-ತಂಗಿ  ಇಲ್ಲದೆ ಒಬ್ಬಳೆ ಮಗಳಾಗಿ ಹುಟ್ಟಿದ ನನ್ನಂತಹವರಿಗೂ ಒಂಟಿತನ ಕಾಡದಂತೆ ಜೊತೆಗಿರುವ  ಜೊತೆಗಾರ. ಕೆಲವೊಮ್ಮೆ ನಮ್ಮವರಿಗೆ ಅಪ್ಪಿ ತಪ್ಪಿ ಬೈದರೆ ಮುಗಿಯಿತು. ಅಲ್ಲೆ ಪ್ರಪಂಚ ಪ್ರಳಯ ಆಗುತ್ತೆ. ಆದ್ರೆ ಎಷ್ಟೆ ಹೊಡೆದರೂ, ಬೈದರೂ ಈ ಟೆಡಿಬೇರ್ ಕೊಡೊ ಎಕ್ಸ್ಪ್ರೆಷನ್ ಬದಲಾಗಲ್ಲ.
ಹೆಣ್ಣು ತಾನು ತಾಯಿಯಾಗುವವರೆಗೂ ಈ ಟೆಡಿಬೇರ್ ನ ಮಗುತರ ನೋಡ್ಕೋತಾಳೆ. ಇದು ಗಂಡಸರಿಗೆ ಹೇಳಿದರೂ ಅರ್ಥವಾಗದ ವಿಷಯ. ಹೆಣ್ಣು ಭಾವ ಜೀವಿ ಅನ್ನೋದಕ್ಕೆ ಟೆಡಿಬೇರ್ ಜೊತೆ ಅವಳಿಗಿರುವ ನಂಟೆ ಸಾಕ್ಷಿ.

Comments

Popular posts from this blog

ಅವಳೆಂಬ ಆಸರೆ.....

ಅವನು

ಒಂಟಿ ಸಲಗ