ಅವಳೆಂಬ ಆಸರೆ.....

ಹೀಗೆ ಹೊತ್ತಲ್ಲದ ಹೊತ್ತಲ್ಲಿ ಅವಳ ನೆನಪುಗಳು ಕಾಡಿ ಭಾವುಕಳಾಗುವುದು ಇದೇ ಮೊದಲೇನಲ್ಲ. ಎಷ್ಟಾದರೂ ಸಾಕಿ ಸಲುಹಿದವಳಲ್ಲವೇ!

ಪ್ರತಿ ಸಣ್ಣ ವಿಷಯಕ್ಕೂ ಅವಳೇ ಬೇಕೆನ್ನುವ ಮನಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ. ಖುಷಿಯೋ, ದುಃಖವೋ ! ಮನಸ್ಸು ಮಾತ್ರ ಅವಳ ಮಡಿಲಲ್ಲಾಡುವ ಮಗುವಾಗಿಬಿಡುತ್ತೆ. ಈಗ ಇಷ್ಟೆಲ್ಲಾ ನೆನಪಾಗಲಿಕ್ಕೆ ಕಾರಣ ಮನೇಲಿ ಮರಿ ಹಾಕಿರೋ ಬೆಕ್ಕು.



ಮೊದಲಿನಿಂದಲೂ ಬೆಕ್ಕು ಅಂದ್ರೆ ನನಗೆ ಅಷ್ಟಕ್ಕಷ್ಟೆ. ಆದ್ರೆ ಈ ಬೆಕ್ಕು ಮಾತ್ರ ನನಗೆ ಸರಿಯಾಗಿ ಚಳ್ಳೆಹಣ್ಣು ತಿನ್ಸಿದೆ. ತಾನು  ಮರಿಯಾದಾಗಿನಿಂದ ಮರಿ ಹಾಕುವವರೆಗೂ ಇದು ಕೊಟ್ಟಿರೋ ಕಾಟ ಒಂದೆರಡಲ್ಲ..!

ಮೊದಮೊದಲು ತುಂಟಾಟವಾಡ್ತಾ ಮನೆ ಹತ್ರ ಬರ್ತಿದ್ದ ಮರಿಗೆ ಅಮ್ಮ ಹಾಲು ಹಾಕಿ ಅಭ್ಯಾಸ ಮಾಡಿದ್ರೆ ಅದು ಮಾತ್ರ ಕಂಡಾಗಲೆಲ್ಲಾ ನನ್ನ ಕಾಲು ಕಚ್ಚ್ತಿತ್ತು. ಮನೆ ಹೊರಗಡೆನೆ ಇರ್ತೀದ್ದಿದ್ದು ಅಡುಗೆ ಮನೆಗೆ ಬರೋಕೆ ಶುರುಮಾಡಿತಾದ್ರೂ ಒಂದು ದಿನವೂ ಕದ್ದು ಹಾಲು ಕುಡಿಯಲಿಲ್ಲ. ಸರಿ ಬಿಡು ಅಂತ ನಿರ್ಲಕ್ಷಿಸಿದ್ದಕ್ಕೆ ಪ್ರತಿಯಾಗಿ ನನ್ನ ಬೆಡ್ ಮೇಲೆ, ನನ್ನ ಪಕ್ಕ, ನನ್ನ ಬೆಡ್ಶೀಟ್ ಹೊದ್ಕೊಂಡು ಮಲಗೋಕೆ ಶುರು ಮಾಡೋದಾ....!  ಕಡೆಗೆ ಅದನ್ನ ಓಡಿಸಿ ರೂಮ್ ಬಾಗಿಲು ಹಾಕಿ ಮಲ್ಕೊಂಡ್ರೆ ಅದ್ಯಾವ ಮಾಯದಲ್ಲಿ ಬಾಲ್ಕನಿಯಿಂದ ಬಂದು ಪಕ್ಕ ಮಲಗ್ತಿತ್ತೊ ಬೆಳಿಗ್ಗೆ ನಾನು ಎದ್ದ ತಕ್ಷಣ ಮೀಯಾಂವ್.... ಅಂತಂದು ಓಡ್ತಿದ್ರೆ ನನಗೆ ನಖಶಿಖಾಂತವಾಗಿ ಉರಿದು ಹೋಗ್ತಿತ್ತು.

 ಕೆಲವೊಮ್ಮೆ ಅರ್ಜೆಂಟ್ ಹೊರಗೆಲ್ಲಾದ್ರೂ ಹೋಗ್ಬೇಕಂದ್ರೆ ಮೆಟ್ಟಿಲಿಗೆ ಅಡ್ಡವಾಗಿ ಮಲಗ್ಬಿಡ್ತಿತ್ತು... ದಾಟುವ ಹಾಗಿಲ್ಲ, ಪಕ್ಕದಲ್ಲಿ ಹೋಗೋಕೆ ಬಿಡ್ತಿಲ್ಲ ಅದೆಷ್ಟು ಸಲ ಹೀಗೆ ಅಡ್ಡ ಹಾಕಿದ್ಯೊ...!
ನಮ್ಮ ಮನೆ ಓನರ್ ಬೇರೆ ಮನೆಗೆ ಶಿಫ್ಟ್ ಆದಾಗಿನಿಂದ ನನ್ನ ರೂಮ್ ಮೇಟ್ ಆಗೋಗಿತ್ತು. ನಿನ್ನೆ ಮಧ್ಯರಾತ್ರಿ ಅಣ್ಣನ ಬರ್ತಡೇ ಸೆಲಬ್ರೇಷನ್ ಮುಗಿಸಿ ಮಲಗಿದ ಎರಡು ನಿಮಿಷಕ್ಕೆ ಕರಪರ ಸದ್ದಿನ ಜೊತೆಗೆ ಪುಟ್ಟ ಮರಿಗಳ ಸದ್ದು. ಎದ್ದು ನೋಡಿದ್ರೆ ಮಂಚದ ಕೆಳಗಿನ ಮೂಲೆಯೊಂದರಲ್ಲಿ ಮರಿ ಹಾಕಿದಾಳೆ..! ಇದುವರೆಗೂ ಎರಡು ಮರಿ ಮಾತ್ರ ನೋಡೋಕೆ ಬಿಟ್ಟವಳು, ಓನರ್'ನ ಮನೆಗೆ ಹೋಗಿ ಬೆಳಿಗ್ಗೆ ಏನೋ ಕೆಲಸ ಮೇಲೆ ಬಂದಿದ್ದ ಅವರನ್ನು ಕರ್ಕೊಂಡ್ ಬಂದು ನಾಲ್ಕು ಮರಿ ಹಾಕಿರೋದನ್ನ ತೋರಿಸಿದ್ದಾಳೆ....!!! ಅವರು ಹೇಳಿಯೇ ಗೊತ್ತಾಗಿದ್ದು..! ಪ್ರಾಣಿಗಳಲ್ಲೂ ಎಂಥ ಅನುಬಂಧ ನೋಡಿ..!  ಆ ಬೆಕ್ಕು ತನ್ನ ಸಾಕಿದ ಮೊದಲ ಮಾಲಿಕರನ್ನೇ ಮರೆಯದೆ ಮರಿ ಹಾಕಿದಾಗ ಕರ್ಕೊಂಡ್ ಬಂದು ತೋರ್ಸಿದೆ ಅಂತಾಗುವಾಗ ಮೂರುವರ್ಷದ ಮಗು ಇದ್ದಾಗಿನಿಂದ ಎತ್ತಾಡಿಸಿ ಬೆಳಸಿದ ಅಜ್ಜಿ - ಅವಳಿಲ್ಲ ಅಂದ್ರೂ ಪ್ರತಿ ವಿಷಯದಲ್ಲೂ ನೆನಪಾಗುವುದು ಸಹಜ ಅಲ್ವಾ!!!

 #ಲವ್ಯೂ_ಜಿಂದಗಿ
ಚಿತ್ರ ಕೃಪೆ: ಅಂತರ್ಜಾಲ

Comments

  1. ಬೆಕ್ಕಿನ ಪುರಾಣ.. ಅದು ಬಿಚ್ಚಿಟ್ಟ ನಿನ್ನ ಗೋಳು ಹುಯ್ಕೊಂಡ ಘಟನೆಗಳು ಸೂಪರ್.. ಬರಹದ ಕಡೆಯ ಸಾಲುಗಳು ಸೂಪರ್.. ನೆನಪೇ ನಿತ್ಯ ದಿನಕರ ಅಲ್ಲವೇ.. ಬೆಳಗಾಗುತ್ತೆ.. ಕತ್ತಲೆಯಾಗುತ್ತೆ.. ಹಾಗೆ ನೆನಪುಗಳು.. ಬರುತ್ತವೆ ಖುಷಿ ಕೊಡುತ್ತವೆ..

    ಸೂಪರ್ ಬರಹ TRP

    ReplyDelete

Post a Comment

Popular posts from this blog

ಅವನು

ಒಂಟಿ ಸಲಗ