Posts

Showing posts from February, 2019

ಅವಳೆಂಬ ಆಸರೆ.....

Image
ಹೀಗೆ ಹೊತ್ತಲ್ಲದ ಹೊತ್ತಲ್ಲಿ ಅವಳ ನೆನಪುಗಳು ಕಾಡಿ ಭಾವುಕಳಾಗುವುದು ಇದೇ ಮೊದಲೇನಲ್ಲ. ಎಷ್ಟಾದರೂ ಸಾಕಿ ಸಲುಹಿದವಳಲ್ಲವೇ! ಪ್ರತಿ ಸಣ್ಣ ವಿಷಯಕ್ಕೂ ಅವಳೇ ಬೇಕೆನ್ನುವ ಮನಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ. ಖುಷಿಯೋ, ದುಃಖವೋ ! ಮನಸ್ಸು ಮಾತ್ರ ಅವಳ ಮಡಿಲಲ್ಲಾಡುವ ಮಗುವಾಗಿಬಿಡುತ್ತೆ. ಈಗ ಇಷ್ಟೆಲ್ಲಾ ನೆನಪಾಗಲಿಕ್ಕೆ ಕಾರಣ ಮನೇಲಿ ಮರಿ ಹಾಕಿರೋ ಬೆಕ್ಕು. ಮೊದಲಿನಿಂದಲೂ ಬೆಕ್ಕು ಅಂದ್ರೆ ನನಗೆ ಅಷ್ಟಕ್ಕಷ್ಟೆ. ಆದ್ರೆ ಈ ಬೆಕ್ಕು ಮಾತ್ರ ನನಗೆ ಸರಿಯಾಗಿ ಚಳ್ಳೆಹಣ್ಣು ತಿನ್ಸಿದೆ. ತಾನು  ಮರಿಯಾದಾಗಿನಿಂದ ಮರಿ ಹಾಕುವವರೆಗೂ ಇದು ಕೊಟ್ಟಿರೋ ಕಾಟ ಒಂದೆರಡಲ್ಲ..! ಮೊದಮೊದಲು ತುಂಟಾಟವಾಡ್ತಾ ಮನೆ ಹತ್ರ ಬರ್ತಿದ್ದ ಮರಿಗೆ ಅಮ್ಮ ಹಾಲು ಹಾಕಿ ಅಭ್ಯಾಸ ಮಾಡಿದ್ರೆ ಅದು ಮಾತ್ರ ಕಂಡಾಗಲೆಲ್ಲಾ ನನ್ನ ಕಾಲು ಕಚ್ಚ್ತಿತ್ತು. ಮನೆ ಹೊರಗಡೆನೆ ಇರ್ತೀದ್ದಿದ್ದು ಅಡುಗೆ ಮನೆಗೆ ಬರೋಕೆ ಶುರುಮಾಡಿತಾದ್ರೂ ಒಂದು ದಿನವೂ ಕದ್ದು ಹಾಲು ಕುಡಿಯಲಿಲ್ಲ. ಸರಿ ಬಿಡು ಅಂತ ನಿರ್ಲಕ್ಷಿಸಿದ್ದಕ್ಕೆ ಪ್ರತಿಯಾಗಿ ನನ್ನ ಬೆಡ್ ಮೇಲೆ, ನನ್ನ ಪಕ್ಕ, ನನ್ನ ಬೆಡ್ಶೀಟ್ ಹೊದ್ಕೊಂಡು ಮಲಗೋಕೆ ಶುರು ಮಾಡೋದಾ....!  ಕಡೆಗೆ ಅದನ್ನ ಓಡಿಸಿ ರೂಮ್ ಬಾಗಿಲು ಹಾಕಿ ಮಲ್ಕೊಂಡ್ರೆ ಅದ್ಯಾವ ಮಾಯದಲ್ಲಿ ಬಾಲ್ಕನಿಯಿಂದ ಬಂದು ಪಕ್ಕ ಮಲಗ್ತಿತ್ತೊ ಬೆಳಿಗ್ಗೆ ನಾನು ಎದ್ದ ತಕ್ಷಣ ಮೀಯಾಂವ್.... ಅಂತಂದು ಓಡ್ತಿದ್ರೆ ನನಗೆ ನಖಶಿಖಾಂತವಾಗಿ ಉರಿದು ಹೋಗ್ತಿತ್ತು.  ಕೆಲವ...